ಲೈಂಗಿಕ ದೌರ್ಜನ್ಯ: ವೀರ್ಯ ಸಾಕ್ಷ್ಯ ಬೇಕಿಲ್ಲ
ನಾಗಪುರ,ಮಾ.26:
ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದಾರೆ (ಅತ್ಯಾಚಾರ) ಎಂಬುದನ್ನು ಸಾಬೀತುಪಡಿಸಲು ಸಾಕ್ಷ್ಯಕ್ಕಾಗಿ ವೀರ್ಯ ಬೇಕಿಲ್ಲ ಎಂದು ಬಾಂಬೆ ಹೈಕೋರ್ಟಿನ ಔರಂಗಾಬಾದ್ ನ್ಯಾಯಪೀಠ ತೀರ್ಪು ನೀಡಿದೆ. ಬಾಧಿತ ಮಹಿಳೆಯರಿಗೆ ಇದು ಬಯಸದೆ ಬಂದ ಭಾಗ್ಯವಾಗಿದ್ದರೆ ಅತ್ಯಾಚಾರಿಗಳಿಗೆ ಮರ್ಮಾಘಾತ ನೀಡಿದೆ. id="toptextpromo">ಮಹಿಳೆಯೊಬ್ಬರನ್ನು
ಅತ್ಯಾಚಾರ ಮಾಡಿ, ಸಾಯಿಸಿದ್ದ ಆಪಾದಿತ ಈ ಸಂಬಂಧ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ. 'ಪ್ರತಿಯೊಂದು ಲೈಂಗಿಕ ಕ್ರಿಯೆಯಲ್ಲೂ ವೀರ್ಯ ಹೊರಬರಬೇಕು ಎಂಬ ನಿಯಮವೇನೂ ಇಲ್ಲ. ಆದ್ದರಿಂದ ಬಾಧಿತ ಮಹಿಳೆಯ ಬಟ್ಟೆ ಅಥವಾ ಮೈಮೇಲೆ ವೀರ್ಯದ ಕಲೆಗಳು ಇದ್ದರೆ ಮಾತ್ರ ಲೈಂಗಿಕ ಕ್ರಿಯೆ ನಡೆದಿದೆ ಎಂದೇನೂ ಅಲ್ಲ. id='are-slot-1' class='oiad oi-axt oiadv'> id='top-searched-articles'>'ಅದಿಲ್ಲದೆಯೂ
ಲೈಂಗಿಕ ಕ್ರಿಯೆ ನಡೆದಿರಬಹುದು' ಎಂದು ನ್ಯಾಯಮೂರ್ತಿಗಳಾದ ನರೇಶ್ ಪಾಟೀಲ್ ಮತ್ತು ಟಿವಿ ನಲವಾಡೆ ಅವರ ನ್ಯಾಯಪೀಠ ಕಳೆದ ವಾರ ಸ್ಪಷ್ಟಪಡಿಸಿದೆ.











Click it and Unblock the Notifications