ನಿಲೇಕಣಿ ಅಲ್ಲ; ಜಿಮ್ ಕಿಮ್ ವಿಶ್ವಬ್ಯಾಂಕ್ ಅಧ್ಯಕ್ಷ

ಆದಾಗ್ಯೂ, ಇನ್ಫೋಸಿಸ್ ಕಂಪನಿಯ ಮಾಜಿ ಬಾಸ್ ನಂದನ್ ನಿಲೇಕಣಿ ಅವರು ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ನೇಮಕವಾಗಲಿದ್ದಾರೆ ಎಂಬ ಸುದ್ದಿಯೊಂದು ಕಾರ್ಪೊರೇಟ್ ವಲಯದಲ್ಲಿ 1 ತಿಂಗಳಿಂದ ಹಬ್ಬಿತ್ತು. ನಿಲೇಕಣಿಗೆ ಆ ಅರ್ಹತೆಯೂ ಇತ್ತು. ಆದರೆ ಮೊನ್ನ ಬಜೆಟ್ಟಿನಲ್ಲಿ ಭಾರತದ ಮಹತ್ವಾಕಾಂಕ್ಷಿ ಆಧಾರ್ ಗುರುತಿನ ಚೀಟಿ ಯೋಜನೆಗೆ ಕೇಂದ್ರ ಸರಕಾರ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿರುವ ಹಿನ್ನೆಲೆಯಲ್ಲಿ ನಿಲೇಕಣಿ ಇಲ್ಲೇ ಉಳಿದಿದ್ದು blessing in disguise ಆಂತಿದೆ.
ಸ್ವತಃ ದೇಶದ ಪ್ರಥಮ ಮಿಶ್ರ ಜನಾಂಗದ ಅಧ್ಯಕ್ಷರಾಗಿ ಅಮೆರಿಕ ರಾಜಕೀಯದ ಸಂಪ್ರದಾಯವನ್ನು ಮುರಿದಿರುವ ಒಬಾಮಾ, ಪರಮಾಣು ಭದ್ರತಾ ಶೃಂಗಕ್ಕಾಗಿ ಕಳೆದ ವಾರ ದಕ್ಷಿಣ ಕೊರಿಯಕ್ಕೆ ನಿರ್ಗಮಿಸುವ ಮುನ್ನ ಈ ಅಚ್ಚರಿದಾಯಕ ಆಯ್ಕೆಯನ್ನು ಪ್ರಕಟಿಸಿದರು. ಸೋಲ್‌ನಲ್ಲಿ ಒಬಾಮಾ ಅವರು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ.
ಕಿಮ್ ಅವರು ದಕ್ಷಿಣ ಕೊರಿಯದಲ್ಲಿ ಜನಿಸಿದರು ಮತ್ತು ಅಯೋವಾದಲ್ಲಿ ಬೆಳೆದು ದೊಡ್ಡವರಾದರು. ಪ್ರಸಕ್ತ ಅವರು ಡಾರ್ಟ್‌ಮೌತ್ ಕಾಲೇಜಿನ ಮುಖ್ಯಸ್ಥರಾಗಿದ್ದಾರೆ. ಅವರು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಎಚ್‌ಐವಿ/ಏಡ್ಸ್ ಇಲಾಖೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಪದವಿ ಮತ್ತು ಅಂಗರಚನೆ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.












Click it and Unblock the Notifications