ಹೆಗ್ಡೆಗೆ ಜಯ ಖಚಿತ, ಅಭಿಮಾನಿಗಳ ವಿಜಯೋತ್ಸವ

Jayaprakash Hegde
ಉಡುಪಿ, ಮಾ.21: ಬಹು ನಿರೀಕ್ಷಿತ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ 10ನೇ ಸುತ್ತಿನ ಮತ ಎಣಿಕೆ ಮುಗಿದ ನಂತರ ಕಾಂಗ್ರೆಸ್ ಭರ್ಜರಿ ಮುನ್ನಡೆ ಸಾಧಿಸಿದ್ದು, ಜಯಪ್ರಕಾಶ್ ಹೆಗ್ದೆ ಗೆಲುವು ಬಹುತೇಕ ಖಚಿತವಾಗಿದೆ.

ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಹೆಗ್ಡೆ ಅಭಿಮಾನಿಗಳು ಈಗಾಗಲೆ ವಿಜಯೋತ್ಸವ ಆಚರಿಸುತ್ತಿದ್ದಾರೆ.

ಕುಂಜಿಬೆಟ್ಟಿನಲ್ಲಿರುವ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮತಗಳ ಎಣಿಕೆ ಕಾರ್ಯವನ್ನು ವೀಕ್ಷಿಸುತ್ತಿರುವ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಹಸನ್ಮುಖರಾಗಿ ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

10ನೇ ಸುತ್ತಿನ ಮತ ಎಣಿಕೆಯಲ್ಲೂ ಕೈಗೆ ಮುನ್ನಡೆ. 33,384 ಮತಗಳ ಮುನ್ನಡೆ ಪಡೆದ ಹೆಗ್ಡೆ ನಾಗಾಲೋಟ ಮುಂದುವರೆಸಿದ್ದಾರೆ. ಸಮೀಕ್ಷೆಗಳ ಪ್ರಕಾರ 10-15 ಸಾವಿರ ಅಂತರದ ಗೆಲುವು ನಿಶ್ಚಿತ ಎನ್ನಲಾಗಿತ್ತು. ಆದರೆ, ಪ್ರತಿ ಸುತ್ತಿನ ಎಣಿಕೆಯಲ್ಲೂ ಕನಿಷ್ಠ 20 ಸಾವಿರ ಅಂತರದ ಮತ ಪಡೆದು ಹೆಗ್ಡೆ ಮುನ್ನಡೆ ಕಾಯ್ದುಕೊಂಡಿದ್ದರು.

ಕಾಂಗ್ರೆಸ್ : 2,37,778, ಬಿಜೆಪಿ: 2,71,162, ಜೆಡಿಎಸ್: 46,873

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+