ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸಲು ಮುಂದಾದ ಈಶ್ವರಪ್ಪ

K S Eshwarappa
ಮೈಸೂರು, ಮಾ 21: ಪಕ್ಷದಲ್ಲಿನ ಇತ್ತೀಚಿನ ವಿದ್ಯಮಾನಗಳು ಮನಸಿಗೆ ಬೇಸರ ತಂದಿದೆ. ಶಿಸ್ತಿನ ಪಕ್ಷದಲ್ಲಿ ಈ ರೀತಿ ಆಗುವುತ್ತಿರುವುದು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ. ವರಿಷ್ಠರು ಬಯಸಿದರೆ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸಲು ಸಿದ್ದ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ವಿ ಎಸ್ ಆಚಾರ್ಯ ಅವರ ಸಂತಾಪ ಸೂಚಿಸುವ ವಿಧಾನಸಭಾ ಕಲಾಪಕ್ಕೂ ಯಡಿಯೂರಪ್ಪ ಬಣ ಬರದಿರುವುದು ವೈಯಕ್ತಿಕವಾಗಿ ಬೇಸರ ತಂದಿದೆ. ಬಿಜೆಪಿಯ ಗೊಂದಲ ಬಗೆಹರಿಯಲು ಪಕ್ಷದ ಹಿರಿಯರು ಬಯಸಿದರೆ, ನನ್ನಿಂದ ಪಕ್ಷಕ್ಕೆ ಒಳ್ಳೆದಾಗುವುದಾದರೆ ರಾಜ್ಯಾಧ್ಯಕ್ಷ ಸ್ಥಾನವನ್ನು ತ್ಯಜಿಸಲು ನಾನು ಸಿದ್ಧ ಎಂದು ಕೆ ಎಸ್‌ ಈಶ್ವರಪ್ಪ ನಂಜನಗೂಡಿನಲ್ಲಿ ಹೇಳಿಕೆ ನೀಡಿದ್ದಾರೆ.

ಶಾಸಕ, ಮಂತ್ರಿ, ಅಧ್ಯಕ್ಷ ಹೀಗೆ ಯಾವುದೇ ಸ್ಥಾನಮಾನ ತಮಗೆ ಸಿಕ್ಕಿರುವುದು ಸಂಘಟನೆಯಿಂದಾಗಿ ಮಾತ್ರ ಮತ್ತು ಅದನ್ನೇ ನಂಬಿರುವುವನು ನಾನು . ಹಾಗಾಗಿ ಪಕ್ಷದ ಮುಂದೆ ಯಾವುದೂ ಮುಖ್ಯವಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಪಕ್ಷದಲ್ಲಿ ಗೊಂದಲಗಳಿದ್ದರೂ, ಕಗ್ಗಂಟಿಲ್ಲ. ಹಿರಿಯರ ಆಶೀರ್ವಾದಿಂದ ಈ ಗೊಂದಲಗಳು ಬಗೆಹರಿಯುತ್ತವೆ ಎನ್ನುವ ವಿಶ್ವಾಸ ನನಗಿದೆ ಎಂದು ಈಶ್ವರಪ್ಪ ಹೇಳಲು ಮರೆಯಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+