ಬರಿಗೈಯಲ್ಲೇ ಕಲ್ಲು ಕುಟ್ಟಿ ಪುಡಿಪುಡಿ ಮಾಡುವ ಪೋರ

Lad smashes stone in bare hands
ಯಾದಗಿರಿ, ಮಾ. 19 : ಇದು ಶಿಲಾಯುಗದ ಕಥೆಯಲ್ಲ. ಕಲಿಯುಗದಲ್ಲಿ ಶಿಲೆಯನ್ನು ಬರಿಗೈಯಿಂದಲೇ ಕುಟ್ಟಿ ಪುಡಿಪುಡಿ ಮಾಡಿ ಸಾಹಸ ಪ್ರದರ್ಶಿಸುವ, ಕಲ್ಲಿನಂಥವರ ಹೃದಯವನ್ನೂ ಕರಗಿಸುವ 10 ವರ್ಷದ ಬಾಲಕನೊಬ್ಬನ ಕಥೆ.

ಆ ಸಾಹಸಿ ಬಾಲಕನೇ 10 ವರ್ಷದ ಶಮೀರ್. ದಿನ ಬೆಳಗಾದರೆ ಜನಸಂದಣಿ ಇರುವ ಪ್ರದೇಶದಲ್ಲಿ ಅಂಗಿ ಬಿಚ್ಚಿ ಕಲ್ಲನ್ನು ಕೈಯಿಂದಲೇ ಗುದ್ದಿ ಪುಡಿ ಮಾಡುತ್ತಾನೆ. ಕಲ್ಲು ಕುಟ್ಟಿ ಪುಡಿ ಮಾಡುತ್ತಿದ್ದರೆ ಎಂಥವರನ್ನೂ ಬೆಚ್ಚಿಬೀಳಿಸುತ್ತದೆ. ಇತನ ಜೊತೆಗೆ ದಾದಾಪೀರ್, ಇಬ್ರಾಹಿಂ, ಕಾಸೀಂ ಎಂಬ ಪೋರರು ಇದ್ದಾರೆ.

ಬಳ್ಳಾರಿ ಜಿಲ್ಲೆಯಿಂದ ಬಂದಿರುವ ಈತನ ಸಾಹಸದಿಂದ ಬೀದಿಯಲ್ಲಿ ಓಡಾಡುವ ಜನರಿಗೆ ಟಿಕೆಟ್ ಇಲ್ಲದೆ ಮನರಂಜನೆ ಸಿಗುತ್ತಿದೆ. ಮೆಚ್ಚಿದವರು ಚಿಲ್ಲರೆ ಬಿಸಾಕುತ್ತಾರೆ, ಕಲ್ಲು ಹೃದಯದವರು ಹಂಗೆ ಹೊರಟುಬಿಡುತ್ತಾರೆ. ಜನ ಮೆಚ್ಚಿ ಕೊಟ್ಟ ಕಾಣಿಕೆಯಿಂದಲೇ ಇವರ ತುತ್ತಿನ ಚೀಲ ತುಂಬುತ್ತದೆ.

ಎಳೆ ವಯಸ್ಸಿನ ಶಮೀರ್ ಯಾದಗಿರಿ ಪಟ್ಟಣದ ತಹಸಿಲ್ದಾರ್ ಕಛೇರಿ ಮುಂದೆ ಸೋಮವಾರ ತನ್ನ ಸಾಹಸ ಪ್ರದರ್ಶಿಸಿ, ಪುಡಿಗಾಸು ಸಂಪಾದಿಸುತ್ತಿದ್ದುದು ನೋಡಿದರೆ ಎಂಥವರಲ್ಲೂ ಮರುಕ ಹುಟ್ಟಿಸುತ್ತಿತ್ತು. ಮಕ್ಕಳೊಂದಿಗೆ ಆಡಿಕೊಂಡಿರಬೇಕಾದ ಈ ಬಾಲಕ ಬೀದಿಯಲ್ಲಿ ಸಾಹಸ ಪ್ರದರ್ಶಿಸುವ ಸ್ಥಿತಿ ಎಲ್ಲರನ್ನೂ ಕೆಲಕಾಲ ಚಿಂತೆಗೀಡು ಮಾಡಿತ್ತು.

ಪ್ರತಿದಿನ ಒಂದೊದು ಪಟ್ಟಣಕ್ಕೆ ತೆರಳಿ ಅಲ್ಲಿ ಕಲ್ಲುಗಳನ್ನು ಕೈಯಿಂದ ಒಡೆದು ಪುಡಿಪುಡಿ ಮಾಡಿ ಪುಡಿಗಾಸು ಸಂಪಾದಿಸುತ್ತಾನೆ. ನಾವು ಈತನನ್ನು ಪ್ರಶ್ನಿಸಿದರೆ ತಂದೆ-ತಾಯಿ ಇಲ್ಲ ನಾವಷ್ಟೇ ಬಂದಿದ್ದೇವೆ ಅಂತ ಹೇಳುತ್ತಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+