ಹಾವೇರಿ : ಮಕ್ಕಳಿಗೆ ವಿಷವುಣಿಸಿ ಕೊಂದ ಪಾಪಿ ತಂದೆ
ಹಾವೇರಿ,
ಮಾ. 17 : ತನ್ನ ಇಬ್ಬರು ಸ್ವಂತ ಕಂದಮ್ಮಗಳಿಗೆ ತಂದೆಯೇ ವಿಷವುಣಿಸಿದ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಹಿರೆಕೇರೂರ್ ತಾಲೂಕಿನ ಕ್ಯಾತನಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜರುಗಿದೆ. id="toptextpromo">ತಂದೆ
ಸುಭಾಷ್ ತನ್ನಿಬ್ಬರು ಮಕ್ಕಳಾದ 4 ವರ್ಷದ ಚಂದ್ರಿಕಾ ಮತ್ತು ಒಂದೂವರೆ ವರ್ಷದ ಅಕ್ಷತಾಗೆ ವಿಷ ಕುಡಿಸಿದ್ದಾನೆ. ಮಕ್ಕಳಲ್ಲಿ ಚಂದ್ರಿಕಾ ಸಾವಿಗೀಡಾಗಿದ್ದು, ಅಕ್ಷತಾಳ ಜೀವ ಉಳಿಸಲು ದಾವಣಗೆರೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಯತ್ನಿಸುತ್ತಿದ್ದಾರೆ. ಮಕ್ಕಳಿಗೆ ವಿಷ ನೀಡಿದ್ದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. id='are-slot-1' class='oiad oi-axt oiadv'> id='top-searched-articles'>ಈ
ಘಟನೆ ತಿಳಿಯುತ್ತಿದ್ದಂತೆ ಸಾರ್ವಜನಿಕರು ಸುಭಾಷ್‌ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸುಭಾಷ್ ವಿರುದ್ಧ ಆತನ ಪತ್ನಿ ಮತ್ತು ಮಕ್ಕಳ ತಾಯಿ ಶಿಲ್ಪಾಳೇ ಪೊಲೀಸರಿಗೆ ದೂರು ನೀಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಶಿಲ್ಪಾಳೂ ವಿಭಿನ್ನ ಹೇಳಿಕೆ ನೀಡುತ್ತಿದ್ದರಿಂದ ಆಕೆಯ ಮೇಲೆಯೂ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.










Click it and Unblock the Notifications