ರೈಲು ಪ್ರಯಾಣ ದರ 2 ಪೈಸೆಯಿಂದ 30 ಪೈಸೆ ಏರಿಕೆ

ಪ್ಯಾಸೆಂಜರ್ ರೈಲು, ಎಕ್ಸ್ ಪ್ರೆಸ್ ರೈಲು, ಹವಾನಿಯಂತ್ರಿತ ವಿಭಾಗ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ 2 ಪೈಸೆಯಿಂದ 30 ಪೈಸೆಯವರೆಗೆ ಪ್ರಯಾಣದರವನ್ನು ಏರಿಸಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ದರ ಪರಿಷ್ಕರಣೆ ಮಾಡುತ್ತಿರುವುದು ಇದೇ ಮೊದಲ ಬಾರಿ. ಹೀಗಾಗಿ, ಶ್ರೀಸಾಮಾನ್ಯರು ಮರುಮಾತಿಲ್ಲದೆ ಬೆಲೆ ಏರಿಕೆಯ ಬಿಸಿ ತಟ್ಟಿಸಿಕೊಳ್ಳಬೇಕಾಗಿದೆ.
ಏರಿಕೆ ದರಗಳು ಕೆಳಗಿನಂತಿವೆ
* ಸಾಮಾನ್ಯ ಎರಡನೇ ದರ್ಜೆಯ ರೈಲು ಪ್ರಯಾಣ ದರ ಪ್ರತಿ ಕಿ.ಮೀ.ಗೆ 2 ಪೈಸೆ.
* ಮೇಲ್ ಮತ್ತು ಎಕ್ಸ್ ಪ್ರೆಸ್ ಎರಡನೇ ದರ್ಜೆ ರೈಲು ಪ್ರಯಾಣ ಪ್ರತಿ ಕಿ.ಮೀ.ಗೆ 3 ಪೈಸೆ.
* ಸ್ಲೀಪರ್ ಕ್ಲಾಸ್ ದರ ಪ್ರತಿ ಕಿ.ಮೀ.ಗೆ 5 ಪೈಸೆ.
* ಮೊದಲ ದರ್ಜೆ, ಎಸಿ ಚೇರ್ ಕಾರ್, ಎಸಿ III ಟಯರ್ ಪ್ರತಿ ಕಿ.ಮೀ.ಗೆ 10 ಪೈಸೆ.
* 1 ಎಸಿ ಕೋಚ್ ಪ್ರಯಾಣ ದರವನ್ನು ಗರಿಷ್ಠ 30 ಪೈಸೆಗೆ ಏರಿಸಲಾಗಿದೆ.
* ಜೊತೆಗೆ ಪ್ಲಾಟ್ ಫಾರಂ ಟಿಕೆಟ್ ದರವನ್ನು 3 ರು.ನಿಂದ 5 ರು.ಗೆ ಏರಿಸಲಾಗಿದೆ. [ಮುಖ್ಯಾಂಶಗಳು]












Click it and Unblock the Notifications