ಅರಣ್ಯ ವಿಲ್ಲಾ- ರಿಯಲ್ ಎಸ್ಟೇಟ್ ಬೂಮ್ ಗೆ ಸಾಕ್ಷಿ

ಯೂನಿಟೆಕ್ ನ ಐಷಾರಾಮಿ ವಿಲ್ಲಾ 'ಅರಣ್ಯ' ಸುಮಾರು 15 ಎಕರೆ ವಿಸ್ತೀರ್ಣ ಜಾಗದಲ್ಲಿ ನಿರ್ಮಾಣವಾಗುತ್ತಿದೆ. ವಿಲ್ಲಾಗಳು 4,319 ದಿಂದ 7,000 ಚ.ಅಡಿ ವಿಸ್ತೀರ್ಣ ಇರುತ್ತದೆ.
ಮೂರನ ತ್ರೈಮಾಸಿಕದಲ್ಲಿ ಸುಮಾರು 513.90 ನಿವ್ವಳ ಲಾಭ ಗಳಿಸಿರುವ ಯೂನಿಟೆಕ್ ಸಂಸ್ಥೆ ಬೆಂಗಳೂರಿನಲ್ಲಿ ಗಟ್ಟಿಯಾಗಿ ತಳವೂರಲು ನಿರ್ಧರಿಸಿದೆ. ಬೇಡಿಕೆ ಹೆಚ್ಚಿದ್ದಂತೆ ಹೊಸ ಹೊಸ ವಿನ್ಯಾಸದ ಅಪಾರ್ಟ್ಮೆಂಟ್ ಗಳು ನಿರ್ಮಾಣವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿಕೆ ಛಡ್ಡಾ ಹೇಳಿದ್ದಾರೆ.
ವಿಲ್ಲಾಗಳಲ್ಲಿ ಎಲ್ಲವೂ ಲಭ್ಯವಿರುತ್ತದೆ. ಎಸಿ, ಅಟೋಮ್ಯಾಟಿಕ್ ವ್ಯವಸ್ಥೆ, ಸಿಸಿಟಿವಿ, ಪ್ರತ್ಯೇಕ ಲಿಫ್ಟ್, ಸೋಲಾರ್ ವಾಟರ್ ಹೀಟರ್, ವಿಡಿಯೋ ಡೋರ್ ಫೋನ್, ಆಗಂತುಕರನ್ನು ತಡೆಗೆ ಅಲಾರಂ, ಕೀ ಇಲ್ಲದೆ ಎಂಟ್ರಿ.. ಇತ್ಯಾದಿ ವ್ಯವಸ್ಥೆ ಇರುತ್ತದೆ
ಜೊತೆಗೆ ಜಿಮ್, ಟೆನ್ನಿಸ್, ಈಜುಕೊಳ, ಬಿಲಿಯರ್ಡ್, ಸ್ಕ್ವಾಶ್, ಕ್ರಿಕೆಟ್, ಗ್ರಂಥಾಲಯ, ಬಾಡ್ಮಿಂಟನ್ ಮುಂತಾದ ಅನುಕೂಲಗಳು ನಿವಾಸಿಗಳಿಗೆ ಲಭ್ಯವಾಗಲಿದೆ ಎಂದು ಸಂಸ್ಥೆ ಹೇಳಿದೆ.












Click it and Unblock the Notifications