ಪ್ರೇಂಜಿಯಿಂದ 1530 ಕೋಟಿ ಮೌಲ್ಯದ ಷೇರು ದಾನ

ವಿಪ್ರೋ ಸಾಫ್ಟ್ ವೇರ್ ಸಂಸ್ಥೆಯಲ್ಲಿ ಅಜೀಂ ಪ್ರೇಂಜಿ ಟ್ರಸ್ಟ್ ಹೊಂದಿರುವ 35 ಮಿಲಿಯನ್ ಷೇರು (10 ಲಕ್ಷ = 1 ಮಿಲಿಯನ್) ಅಥವಾ ಶೇ 1.4ರಷ್ಟು ಪ್ರಮಾಣವನ್ನು ಹರಾಜು ಹಾಕಿ, ಶಿಕ್ಷಣ ಯೋಜನೆಗೆ ಬಳಸಲಾಗುವುದು ಎಂದು ಸಂಸ್ಥೆ ಹೇಳಿದೆ.
ದೇಶದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿಯಲ್ಲಿ ಅಜೀಂ ಪ್ರೇಂಜಿ ಕುಟುಂಬ ಶೇ 79ರಷ್ಟು ಷೇರುಗಳನ್ನು ಹೊಂದಿದೆ. 35 ಮಿಲಿಯನ್ ಷೇರುಗಳ ಮೌಲ್ಯ ಸುಮಾರು 1,532 ಕೋಟಿ ರು ಎಂದು ಅಂದಾಜಿಸಲಾಗಿದೆ.
ವಿಪ್ರೋ ಚೇರ್ ಮನ್ ಪ್ರೇಂಜಿ ಅವರು ವನಸ್ಪತಿ ಖಾದ್ಯ ತೈಲ ವ್ಯಾಪಾರದಿಂದ ಹೈಡ್ರಾಲಿಕ್ಸ್ ಸಿಲಿಂಡರ್ಸ್ ಉದ್ಯಮಕ್ಕೆ ಇಳಿದು 80 ರ ದಶಕದಲ್ಲಿ ಸಾಫ್ಟ್ ವೇರ್ ಲೋಕಕ್ಕೆ ಕಾಲಿರಿಸಿದರು. ಆಜೀಂ ಪ್ರೇಂಜಿ ಶಿಕ್ಷಣ ಟ್ರಸ್ಟ್ ಲಾಭ ನಿರೀಕ್ಷಿಸದ ಸರ್ಕಾರೇತರ ಸಂಸ್ಥೆ ಆಗಿದೆ.












Click it and Unblock the Notifications