ಕೊಡಗಿನ ಕಾಮುಕ ಪೊಲೀಸನಿಗೆ ಇಲಾಖೆಯ ಶ್ರೀರಕ್ಷೆ

ಜ್ಯೋತಿ (ಹೆಸರು ಬದಲಾಯಿಸಲಾಗಿದೆ) ಕಳೆದ ನಾಲ್ಕು ವರ್ಷಗಳಿಂದ ಸೋಮವಾರಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
2011 ರ ಏಪ್ರಿಲ್ ತಿಂಗಳಿನಿಂದ ಈಕೆ ಬದುಕು ಸಂಕಷ್ಟಮಯವಾಗಿದೆ. ಇದಕ್ಕೆ ಕಾರಣ ಇಲ್ಲಿನ ಇನ್ಸ್‌ಪೆಕ್ಟರ್ ವಿ ಕೃಷ್ಣಯ್ಯ. ಕೃಷ್ಣಯ್ಯ ತನ್ನ ಅಧೀನದಲ್ಲೇ ಕೆಲಸ ಮಾಡುತ್ತಿದ್ದ ಜ್ಯೋತಿಯ ಮೇಲೆ ತನ್ನ ಕಾಮುಕ ದೃಷ್ಟಿ ಬೀರಿದ್ದಾರೆ.
ಮೊದಲಿಗೆ ಈ ವಿವಾಹಿತ ಮಹಿಳಾ ಕಾನ್ಸ್‌ಟೇಬಲ್ ಜತೆ ಸಲಿಗೆಯಿಂದ ವರ್ತಿಸಲು ಆರಂಭಿಸಿದ ಈತ ನಂತರ ಮದ್ಯದ ಅಮಲಿನಲ್ಲಿ ಕಚೇರಿ ಮುಗಿದ ನಂತರ ರಾತ್ರಿ 11 ಗಂಟೆಯವರೆಗೆ ಕನಿಷ್ಟ 38 ಬಾರಿ ಮೊಬೈಲ್ ಗೆ ಕರೆ ಮಾಡಿದ್ದಾರೆ.
ಒಂದೆರಡು ಬಾರಿ ಕರೆ ಸ್ವೀಕರಿಸಿದಾಗ ಸಲುಗೆಯಿಂದ ಮಾತನಾಡಿದ್ದಾರೆ. ನಂತರ ಕರೆ ಸ್ವೀಕರಿದಿದ್ದಾಗ ಸೋಮವಾರಪೇಟೆ ಪೋಲೀಸ್ ಠಾಣೆಯ ಪೇದೆ ಈರಪ್ಪ ಅವರನ್ನು ಜ್ಯೋತಿ ಅವರ ಮನೆಗೆ ರಾತ್ರಿ 10.30 ಗಂಟೆಗೆ ಕಳುಹಿಸಿ ಕರೆ ಸ್ವೀಕರಿಸುವಂತೆಯೂ ಕೋರಿದ್ದಾನೆ.
ಜ್ಯೋತಿ ಅವರಿಗೆ ಪತ್ರಗಳನ್ನೂ ನೀಡಿದ್ದಲ್ಲದೆ, ಆಗಾಗ ಕ್ಯಾಡ್ ಬರಿ ಚಾಕಲೋಟ್ ತಿನ್ನಿಸಲು ಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ.
ಜ್ಯೋತಿ ಈತನ ವರ್ತನೆಯನ್ನು ಖಂಡಿಸಿ ಡಿವೈ ಎಸ್ ಪಿ ಜಯಪ್ರಕಾಶ್ ಹಾಗೂ ಎಸ್ ಪಿ ಮಂಜುನಾಥ್ ಅಣ್ಣಿಗೇರಿ ಅವರಿಗೆ ದೂರು ನೀಡಿದ್ದಾರೆ. ಆದರೆ, ಎಸ್ ಪಿ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದರೆ ತನಿಖೆಗೆ ಆದೇಶಿಸಿದ ನಾಟಕವಾಡಿದ್ದಾರೆ.
ತನಿಖಾಧಿಕಾರಿ ಜಯ ಪ್ರಕಾಶ್ ಅವರು ಇನ್ಸ್‌ಪೆಕ್ಟರ್ ಕೃಷ್ಣಯ್ಯನನ್ನು ತಪ್ಪಿತಸ್ಥನೆಂದು ವರದಿ ನೀಡಿದರೂ ಈ ಇನ್ಸ್‌ಪೆಕ್ಟರ್ ವಿರುದ್ದ ಏನೂ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಕಂಗಾಲಾದ ಜ್ಯೋತಿಗೆ ಶಾಕ್ ಮೇಲೆ ಶಾಕ್ ಸಿಕ್ಕಿದೆ ಅದು ಪೊಲೀ ಇಲಾಖೆ ಸಹದ್ಯೋಗಿಗಳಿಂದ ಎಂಬುದು ಆಘಾತಕಾರಿಯಾಗಿದೆ.
ಜ್ಯೋತಿಗೆ ಕಾದಿತ್ತು ಇನ್ನೊಂದು ಶಾಕ್? ಮುಂದೆ ಓದಿ












Click it and Unblock the Notifications