Oracle ಕ್ಯಾಂಟೀನಿನಲ್ಲಿ ಟೆಕ್ಕಿಗಳಿಗೆ ಹಲ್ಲಿ ಸಾಂಬಾರ್!

ಸೋಮವಾರ ಮಧ್ಯಾಹ್ನ ಟೆಕ್ಕಿಯೊಬ್ಬರು ಎಂದಿನಂತೆ ಮಧ್ಯಾಹ್ನ ಊಟಕ್ಕೆಂದು ಕ್ಯಾಂಟೀನಿನಲ್ಲಿ ಕುಳಿತಿದ್ದಾರೆ. ಮಾಣಿಯೂ ಎಂದಿನಂತೆ ಅನ್ನ ಸಾಂಬಾರ್ ಬಡಿಸಿದ್ದಾನೆ. ಆದರೆ ಅವನಿಗೇನು ಗೊತ್ತು ಭಟ್ಟ ಮಾಡಿದ ಸಾಂಬಾರಿನಲ್ಲಿ ಹಲ್ಲಿ ಬಿದ್ದಿದೆ ಅಂತ. ಆದರೆ ಅದು ತಟ್ಟೆಗೆ ಬೀಳುತ್ತಿದ್ದಂತೆ ಟೆಕ್ಕಿ ಛಂಗನೆ ಹೌಹಾರಿದ್ದಾರೆ.
ಹಾಗೆ ನೊಡಿದರೆ ಇನ್ಫೋಸಿಸ್, ವಿಪ್ರೋದಂತಹ ಐಟಿಗಳು ಅತ್ಯುತ್ತಮ ವೆರೈಟಿಯ ರುಚಿಕಟ್ಟಾದ eatableಗಳನ್ನೇ ಬಡಿಸುತ್ತದೆ. ಆದರೆ ಈ Oracle ಕಂಪನಿ ಇದೆಯಲ್ಲಾ... ಅಲ್ಲಿನ ಕ್ಯಾಂಟೀನಿನಲ್ಲಿ ಎಲ್ಲವೂ ಸರಿಯಿಲ್ಲ. ಟೆಕ್ಕಿಗಳು ಆಗಾಗ ಲೊಚಗುಟ್ಟತ್ತಲೇ ಇರುತ್ತಾರೆ. ಆದರೆ ಇಂದು ಲೊಚಗುಟ್ಟುವ ಹಲ್ಲಿಯೇ ತಟ್ಟೆಗೆ ಬಿದ್ದಿದೆ. ಧನ್ಯೋಸ್ಮಿ ಎಂದ ಟೆಕ್ಕಿಗಳು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ತಕ್ಷಣ upgrade the system ಎಂದು ಕೂಗಾಡಿದ್ದಾರೆ.
ಘಟನೆ ನಡೆದ Oracle Global Financial Information Center (GFIC) officeನಲ್ಲಿ ಸರಿ ಸುಮಾರು ಮುನ್ನೂರು ಉದ್ಯೋಗಿಗಳಿದ್ದಾರೆ. ಚಿತ್ರದ ಮೂಲಕ ಉದ್ಯೋಗಿಗಳ ಇಮೇಲಿನಲ್ಲಿ ಹಲ್ಲಿ ಇನ್ನೂ ಸರಿದಾಡುತ್ತಿದೆ. ಉದ್ಯೋಗಿಗಳೂ ಹಲ್ಲಿ ಸಾಂಬಾರಿನ ದುಃಸ್ವಪ್ನದಿಂದ ಇನ್ನೂ ಹೊರಬಂದಿಲ್ಲ.












Click it and Unblock the Notifications