ಹಿಂದೂ ನಾಯಕ ಸುನಿಲ್ ಆಸ್ತಿ ಕೋಟಿ ದಾಟಿಲ್ಲ
ಆದರೆ, ಜೊತೆಗಾರ ಸಿಟಿ ರವಿ ಅವರು ಮಾತ್ರ ಎಲ್ಲೂ ಕಾಣಿಸಲಿಲ್ಲ. ಆಮೇಲೆ ಬಂದ ಸುದ್ದಿ ಪ್ರಕಾರ ಬಿಜೆಪಿ ಗೆಲುವಿಗಾಗಿ ರವಿ ಅವರು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ತೆರಳಿದ್ದರು. ಸುನಿಲ್ ಕುಮಾರ್ ಅವರ ಗೆಲುವಿಗಾಗಿ ಇಂದಿನಿಂದ ಆರಂಭಗೊಳ್ಳುವ ಪ್ರಚಾರ ಕಾರ್ಯದ ಜೊತೆಗೆ ವಿಶೇಷ ಪೂಜೆ ಪುನಸ್ಕಾರಕ್ಕೆ ರವಿ ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.
ಸುನಿಲ್ ಕುಮಾರ್ ಸಲ್ಲಿಸಿದ ಆಸ್ತಿ ವಿವರಗಳು ಇಂತಿವೆ:
ನಗದು: 52,000 ರು.., ಪತ್ನಿ ಹೆಸರಿನಲ್ಲಿ 30,000 ರು.
ಠೇವಣಿ: ಬ್ಯಾಂಕ್ ಖಾತೆಯಲ್ಲಿ 1.5 ಲಕ್ಷ.ರು., ಪತ್ನಿ ಹೆಸರಿನಲ್ಲಿ 94,737 ರು.., ರಾಷ್ಟ್ರೀಯ ಉಳಿತಾಯ ಪತ್ರ: 2.65 ಲಕ್ಷ.ರು..
ವಾಹನ ಮೌಲ್ಯ: 15.59 ಲಕ್ಷ.ರು., ಒಡವೆ: 110 ಗ್ರಾಂ. ಚಿನ್ನ 2.85 ಲಕ್ಷ.ರು. ಮೌಲ್ಯ, ಪತ್ನಿ ಹೆಸರಿನಲ್ಲಿ 1,725 ಗ್ರಾಂ. ಚಿನ್ನ 44.85 ಲಕ್ಷ.ರು. ಮೌಲ್ಯ, ಬೆಳ್ಳಿ 10 ಕೆ.ಜಿ., ಬೆಲೆ 5.7 ಲಕ್ಷ.ರು.,
ಕ್ಲೇಮುಗಳು: ಉಡುಪಿಯ ಶ್ರೀಕೃಷ್ಣ ಮೆಡಿಕಲ್ ಸಂಸ್ಥೆಯಲ್ಲಿ 4 ಲ.ರೂ. ಹೂಡಿಕೆ.
ಆಸ್ತಿ: ಕಾರ್ಕಳ ತಾಲೂಕು ಕಡ್ತಲ ಗ್ರಾಮದಲ್ಲಿ 9.32 ಎಕರೆ, ನಿಟ್ಟೆಯಲ್ಲಿ 1.06 ಎಕರೆ, ಮೌಲ್ಯ 6.67 ಲ.ರೂ., ಪತ್ನಿ ಹೆಸರಿನಲ್ಲಿ ಕಡ್ತಲದಲ್ಲಿ 2.01 ಎಕರೆ, 4.62ಲಕ್ಷ.ರು.
ಸಾಲ ಬಾಕಿ : ಸಿಂಡಿಕೇಟ್ ಬ್ಯಾಂಕ್ ಕಾರ್ಕಳದಲ್ಲಿ ವಾಹನ ಖರೀದಿ ಸಾಲ 11.96 ಲಕ್ಷ.ರು., ಕೃಷಿ ಸಾಲ 6.79 ಲಕ್ಷ.ರು.
ಒಟ್ಟು ಆದಾಯ: 5.12 ಲಕ್ಷ.ರು.
ಚರಾಸ್ತಿ ಒಟ್ಟು ಮೌಲ್ಯ: 8.1 ಲಕ್ಷ.ರು, ಪತ್ನಿ ಹೆಸರಿನಲ್ಲಿ 55.79 ಲಕ್ಷ.ರು; ಸ್ಥಿರ ಆಸ್ತಿ ಖರೀದಿ ಮತ್ತು ಅಭಿವೃದ್ಧಿ ವೆಚ್ಚ 16.75 ಲಕ್ಷ.ರು, ಪತ್ನಿ ಹೆಸರಿನಲ್ಲಿ 2.25 ಲಕ್ಷ.ರು, ಈಗಿನ ಮೌಲ್ಯ ಕ್ರಮವಾಗಿ 33.32 ಲಕ್ಷ.ರು., 4.62 ಲಕ್ಷ.ರು,
ಬ್ಯಾಂಕ್ ಒಟ್ಟು ಸಾಲ: 18.75 ಲಕ್ಷ.ರು.