ಸಿವಿಲ್ ಸರ್ವಿಸಸ್ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ
ನವದೆಹಲಿ,
ಮಾ.1: ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿರುವ ಲಕ್ಷಾಂತರ ಯುವ ಪೀಳಿಗೆಯ ಕನಸಿನ ಪರೀಕ್ಷೆ ಸಿವಿಲ್ ಸರ್ವಿಸಸ್ (ಮುಖ್ಯ) 2011ರ ಫಲಿತಾಂಶಗಳು ಹೊರಬಿದ್ದಿವೆ. ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾದವರ ನೋಂದಣಿ ಸಂಖ್ಯೆಯನ್ನು ಕೇಂದ್ರ ಲೋಕ ಸೇವಾ ಆಯೋಗವು ಗುರುವಾರ (ಮಾ.1) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. id="toptextpromo">ಮಾರ್ಚ್
19, 2012ರಿಂದ ವ್ಯಕ್ತಿತ್ವ ಪರೀಕ್ಷೆ ನವದೆಹಲಿಯ ಕೇಂದ್ರ ಲೋಕಸೇವಾ ಆಯೋಗ ಕಚೇರಿಯಲ್ಲಿ ನಡೆಯಲಿದೆ. ಪರೀಕ್ಷೆಯ ದಿನಾಂಕ ಮತ್ತು ಸಮಯವನ್ನು ಅರ್ಹ ಅಭ್ಯರ್ಥಿಗಳಿಗೆ ಪತ್ರ ಮುಖೇನ ರವಾನಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಪತ್ರ
ತಲುಪದ ಅರ್ಭರ್ಥಿಗಳು ಆಯೋಗವನ್ನು ಈ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು ಹೀಗಿವೆ: 011-23385271, 011-23381125, 011-23098543 ಅಥವಾ Fax Nos. 011-23387310, 011-23384472. ಫಲಿತಾಂಶಕ್ಕಾಗಿ www.upsc.gov.in ವೆಬ್‌ಸೈಟನ್ನು ನೋಡಬಹುದು. (ಒನ್‌ಇಂಡಿಯಾ ಕನ್ನಡ)











Click it and Unblock the Notifications