ಪುಕ್ಕಟ್ಟೆ ಟಿಕೆಟ್ ಪಡೆಯಿರಿ ವಿಜಯ್ ಮಲ್ಯ ಆಫರ್
ಬೆಂಗಳೂರು,
ಮಾ.1: ಕಿಂಗ್ ಫಿಷರ್ ಏರ್ ಲೈನ್ಸ್ ಭರ್ಜರಿ ಕೊಡುಗೆಗಳನ್ನು ತನ್ನ ಪ್ರಯಾಣಿಕರಿಗೆ ನೀಡುತ್ತಿದೆ. ಪ್ರಯಾಣಿಕರಲ್ಲಿ ನಂಬಿಕೆ ಉಳಿಸಿಕೊಳ್ಳಲು ಟಿಕೆಟ್ ಬುಕ್ಕಿಂಗ್ ಮಾಡಿದ ಎಲ್ಲಾ ಪ್ರಯಾಣಿಕರಲ್ಲಿ ಕ್ಷಮೆ ಬೇಡುತ್ತಾ, ಉಚಿತ ಪ್ರಯಾಣದ ಆಫರ್ ನೀಡಿದೆ. id="toptextpromo">ಫೆ.17
ರಿಂದ ಫೆ.26ರೊಳಗೆ ಆನ್ ಲೈನ್ ಅಥವಾ ಏಜೆಂಟ್ ಮೂಲಕ ಟಿಕೆಟ್ ಕಾಯ್ದಿರಿಸಿ, ಪ್ರಯಾಣ ಮಾಡಲು ಆಗದೆ ತೊಂದರೆ ಅನುಭವಿಸಿದ ಪ್ರಯಾಣಿಕರಿಗೆ ಒಂದು ಬಾರಿ ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡಲಾಗಿದೆ ಎಂದು ಕಿಂಗ್ ಫಿಷರ್ ಸಂಸ್ಥೆ ಸಿಇಒ ಸಂಜಯ್ ಅಗರವಾಲ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕಿಂಗ್
ಫಿಷರ್ ಆರ್ಥಿಕ ಬಿಕ್ಕಟ್ಟು ಪರಿಹರಿಸಲು ಹರಸಾಹಸ ಪಡುತ್ತಿರುವ ವಿಜಯ್ ಮಲ್ಯ ಕೂಡಾ ಈ ಆಫರ್ ಗೆ ಸಮ್ಮತಿಸಿದ್ದಾರೆ. ವಿಮಾನಯಾನ ಸರಿಯಾದ ವೇಳೆಗೆ ಆದರೆ ಎಲ್ಲವೂ ಸರಿ ಹೋಗುತ್ತದೆ. ಇನ್ನೊಂದು ವಾರದಲ್ಲೇ ಕಿಂಗ್ ಫಿಷರ್ ಮರಳಿ ಹಿಂದಿನ ವೇಗ ಪಡೆಯಲಿದೆ ಎಂದಿದ್ದಾರೆ.











Click it and Unblock the Notifications