ಶೀಘ್ರದಲ್ಲೇ ಈ ಮಣಿಪಾಲ್ ಆಸ್ಪತ್ರೆ ಮುಚ್ಚಲಾಗುತ್ತೆ

ಕೆಂಚನಹಳ್ಳಿ ಮುಖ್ಯರಸ್ತೆ ರಾಜರಾಜೇಶ್ವರಿ ನಗರದಲ್ಲಿರುವ ಮಣಿಪಾಲ್ ಸಮೂಹದ ಆಸ್ಪತ್ರೆ ಹಣಕಾಸು ಮುಗ್ಗಟ್ಟಿನ ಕಾರಣದಿಂದ ಮುಚ್ಚಲಾಗುತ್ತಿದೆ. ಆಸ್ಪತ್ರೆಯನ್ನು ಹೆಚ್ಚು ದಿನ ಮುಂದುವರೆಸಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಲಾಗಿದೆ.
ಈ ಹಿಂದೆ ನೇಪಾಳದಲ್ಲಿ ಮಾವೋವಾದಿಗಳು ಬಲವಂತವಾಗಿ ಮಣಿಪಾಲ್ ಸಮೂಹದ ಆಸ್ಪತ್ರೆಗಳನ್ನು ಮುಚ್ಚಲಾಗಿತ್ತು. ಆದರೆ, ನಂತರ ಸರ್ಕಾರ ಬದಲಾಗಿ ಆಸ್ಪತ್ರೆ ಮತ್ತೆ ಕಾರ್ಯಾರಂಭ ಮಾಡಿದೆ.
ಇದಾದ ಮೇಲೆ ಇದೇ ಮೊದಲ ಬಾರಿಗೆ ಹಣಕಾಸು ಮುಗ್ಗಟ್ಟಿನ ಕಾರಣಕ್ಕೆ ಆಡಳಿತ ಮಂಡಳಿ ಆಸ್ಪತ್ರೆ ಮುಚ್ಚುತ್ತಿದೆ. ಆಸ್ಪತ್ರೆಯ ಸಿಬ್ಬಂದಿಯ ಇತರ ಸಂಸ್ಥೆಗಳಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಅನೇಕ ನೌಕರರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಇಲ್ಲಿನ 120 ಹಾಸಿಗೆ ಗಳ ಮಣಿಪಾಲ್ ಆಸ್ಪತ್ರೆ ಬೆಂಗಳೂರಿನ ಸುಸಜ್ಜಿತ ಆಸ್ಪತ್ರೆಯಾಗಿದ್ದು 50ಕ್ಕೂ ಅಧಿಕ ತಜ್ಞರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಮಣಿಪಾಲ್ ಇತರ ಮೂರು ಆಸ್ಪತ್ರೆಗಳು ಜಯನಗರ, ಮಲ್ಲೇಶ್ವರಂ ಮತ್ತು ವಿಮಾನ ನಿಲ್ದಾಣ ರಸ್ತೆಯಲ್ಲಿದೆ.
ರಾಜರಾಜೇಶ್ವರಿ ನಗರದ ಮಣಿಪಾಲ್ ಆಸ್ಪತ್ರೆಯ ಸುತ್ತ ಹಲವು ಆಸ್ಪತ್ರೆಗಳು ಇದ್ದು ಪೈಪೋಟಿಯ ಪರಿಣಾಮವಾಗಿಯೇ ಈ ಆಸ್ಪತ್ರೆ ನಷ್ಟ ಅನುಭವಿಸಿದೆ ಎನ್ನಲಾಗಿದೆ.
ವೈದ್ಯಕೀಯ ಕ್ಷೇತ್ರಕ್ಕೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯದಿರುವುದರಿಂದ ಆಸ್ಪತ್ರೆಯ
ನಿರ್ವಹಣೆಗೆ ತಗಲುವ ವೆಚ್ಚ ಭರಿಸಲು ಕಷ್ಟವಾದ್ದರಿಂದ ಈ ರೀತಿ ನಿರ್ಧಾರಕ್ಕೆ ಬರಲಾಗಿದೆ ಎಂದು ಆಸ್ಪತ್ರೆ ವಕ್ತಾರರು ಹೇಳಿದ್ದಾರೆ.












Click it and Unblock the Notifications