ಶುಭಮಸ್ತು! ಆಟೋ ಪ್ರಯಾಣ ದರ ಏರಿಕೆ
ಬೆಂಗಳೂರು,
ಫೆ.26: ಆಟೋ ಪ್ರಯಾಣಿಕರಿಗೆ ವಾರ ಭವಿಷ್ಯ ಹೀಗಿದೆ: ಈ ವಾರದಲ್ಲೇ ನಗರದಲ್ಲಿ ಆಟೋ ಪ್ರಯಾಣ ದರಗಳು ದುಬಾರಿಯಾಗಲಿವೆ. ಆಟೋ ಪ್ರಯಾಣದ ಕನಿಷ್ಠ ದರ 3 ರುಪಾಯಿ ಏರಿಕೆಯಾಗಲಿದೆ (ಅಲ್ಲಿಗೆ ಮಿನಿಮಮ್ 20 ರುಪಾಯಿ). ಹಾಗೆಯೇ, ಕಿಲೋ ಮೀಟರ್ ಒಂದಕ್ಕೆ 1 ರುಪಾಯಿ ಹೆಚ್ಚಳವಾಗಲಿದೆ. ಈ ಸಂಬಂಧ ನಗರದ ಜಿಲ್ಲಾಧಿಕಾರಿ ಎಂ ಕೆ ಅಯ್ಯಪ್ಪ ಮುಂದಿನ ವಾರ ಆಟೊ ಮಾಲೀಕರ ಸಭೆ ಕರೆದಿದ್ದಾರೆ. id="toptextpromo">ಈ
ಹಿಂದೆ 2008ರ ಫೆಬ್ರವರಿ 1ರಂದು ತೆಗೆದುಕೊಳ್ಳಲಾಗಿದ್ದ ನಿರ್ಣಯದಂತೆ 3 ವರ್ಷ ದಾಟಿದ ಬಳಿಕ, ಜತೆಗೆ ಎಲ್ ಪಿಜಿ ದರ ಲೀಟರಿಗೆ 45 ರುಪಾಯಿ ತಲುಪಿದಾಗ ಆಟೋ ಪ್ರಯಾಣ ದರ ಏರಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಅದರಂತೆ ಈಗ ಆಟೋ ಎಲ್ ಪಿಜಿ ದರ ಲೀಟರಿಗೆ 44.50 ರುಪಾಯಿ ತಲುಪಿದೆ. ಮತ್ತು ಸದ್ಯದಲ್ಲಿಯೇ ಮತ್ತೆ ಏರಿಕೆಯಾಗುವ ಲಕ್ಷಣಗಳಿವೆ. ಈ ಮಧ್ಯೆ ಆಟೋ ರಿಕ್ಷಾ ವಿಮೆಯನ್ನು 1,000 ರು. ಗೆ ಏರಿಸಲಾಗಿದೆ. ಆದ್ದರಿಂದ ಆಟೋ ಪ್ರಯಾಣ ದರ ಏರಿಕೆ ಅನಿವಾರ್ಯ ಎಂಬುದು ಆಟೋ ಮಾಲೀಕರ ವಾದ. id='are-slot-1' class='oiad oi-axt oiadv'> id='top-searched-articles'>ದೇಶದ
ಪ್ರಮುಖ ನಗರಗಳಿಗೆ ಹೋಲಿಸಿದಲ್ಲಿ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಈಗಾಗಲೇ ಅತ್ಯಧಿಕವಾಗಿದೆ. ಈ ಹಿಂದೆ 2010ರ ಜುಲೈನಲ್ಲಿ ಆಟೋ ಪ್ರಯಾಣ ದರ ಏರಿಸಲಾಗಿತ್ತು. ಪ್ರಸ್ತುತ ಕನಿಷ್ಠ ಆಟೋ ಪ್ರಯಾಣ ದರ 17 ರುಪಾಯಿಯಷ್ಟಿದೆ. ಇದನ್ನು 24 ರು. ಗೆ ಏರಿಸುವಂತೆಯೂ ಮತ್ತು ಕಿಲೋ ಮೀಟರ್ ಪ್ರಯಾಣ ದರವನ್ನು ಹಾಲಿ 9 ರು ನಿಂದ 12ಕ್ಕೆ ಏರಿಸುವಂತೆ ಆಟೋ ಮಾಲೀಕರು ಬೇಡಿಕೆಯಿಟ್ಟಿದ್ದಾರೆ.











Click it and Unblock the Notifications