ಅಗ್ನಿಶಾಮಕದಳ ಅಣಕು ಆಟಕ್ಕೆ ಯುವತಿ ಬಲಿ

Mock Act Fire Department
ಬೆಂಗಳೂರು, ಫೆ.24: ಪೀಣ್ಯ ವಿಭಾಗದ ಅಗ್ನಿಶಾಮಕದಳದ ಅಣಕು ಪ್ರದರ್ಶನ ಅನಾಹುತದಲ್ಲಿ ಅಂತ್ಯಗೊಂಡಿದೆ. ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಗಾರ್ಮೆಂಟ್ಸ್ ಉದ್ಯೋಗಿ ನಳಿನಿ ಎಂಬ ಯುವತಿ ದುರಂತ ಸಾವನ್ನಪ್ಪಿದ್ದಾಳೆ.

ಬೆಂಕಿ ಬಿದ್ದಾಗ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮ, ಪ್ರಥಮ ಚಿಕಿತ್ಸೆ, ಪರಿಹಾರ ಕಾರ್ಯದ ಬಗ್ಗೆ ಪೀಣ್ಯ ವಿಭಾಗದ ಅಣಕು ಪ್ರದರ್ಶನ ನಡೆಸಿತ್ತು. ಬಾಂಬೆ ರಿಯಾನ್ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ನಳಿನಿ ಎಂಬ 23 ವರ್ಷದ ಯುವತಿಯನ್ನು ಈ ಅಣಕು ಆಟದಲ್ಲಿ ಪಾಲ್ಗೊಳ್ಳುವಂತೆ ಅಗ್ನಿಶಾಮಕದಳದವರು ಕೇಳಿಕೊಂಡಿದ್ದರು.

ನಳಿನಿ ಕೂಡಾ ಈ ಸಾಹಸದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದಳು. ಅದರಂತೆ, ನಳಿನಿ ಸೊಂಟಕ್ಕೆ ಹಗ್ಗ ಕಟ್ಟಿ ಮೂರನೇ ಮಹಡಿಯಿಂದ ಕೆಳಗೆ ಇಳಿ ಬಿಡಲಾಗಿತ್ತು. ಆದರೆ, ಹಗ್ಗ ತುಂಡಾಗಿ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ನಳಿನಿ ರಕ್ತ ಕಾರಿ ಸಾವನ್ನಪ್ಪಿದ್ದಾಳೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ಗಾರ್ಮೆಂಟ್ಸ್ ಕಾರ್ಮಿಕರು ಅಗ್ನಿಶಾಮಕದಳದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+