ಸಲಿಂಗಕಾಮ ನಿಷೇಧಕ್ಕೆ ಮತ್ತೊಮ್ಮೆ ಚಿಂತನೆ

'ಗೇ ಸೆಕ್ಸ್ ಭಾರತದ ಸಮಾಜಲ್ಲಿ ಒಪ್ಪಲು ಸಾಧ್ಯವಿಲ್ಲ. ಇದೊಂದು ಸಾಮಾಜಿಕ ಪಿಡುಗು. ಈ ರೀತಿ ಕಾಮಾಚರಣೆಗೆ ಅನುವು ಮಾಡಿಕೊಟ್ಟರೆ ಭಯಾನಕ ಕಾಯಿಲೆಗಳು ವ್ಯಾಪ್ತಿಸುತ್ತದೆ' ಎಂದು ಗೃಹ ಸಚಿವಾಲಯದ ಪರ ವೀಲ ಪಿಪಿ ಮಲ್ಹೋತ್ರಾ ಅವರು ಸುಪ್ರೀಂಕೋರ್ಟ್ ನಲ್ಲಿ ವಾದಿಸಿದರು.
ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ಕಿರುಕುಳವನ್ನು ತಪ್ಪಿಸಲು ಗೇ ಸೆಕ್ಸ್ ಕುರಿತು ಇರುವ ಕಾನೂನಿನಲ್ಲಿ ತಿದ್ದುಪಡಿಗೆ ಅನುವು ಮಾಡಿಕೊಡಬೇಕು ಎಂದು ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ.
2009ರಲ್ಲಿ ವಯಸ್ಕರ ನಡುವಿನ ಗೇ ಸೆಕ್ಸ್ ಗೆ ದೆಹಲಿ ಹೈ ಕೋರ್ಟ್ ಅನುಮತಿ ನೀಡಿ ಐಪಿಸಿ ಸೆಕ್ಷನ್ 377ಕ್ಕೆ ತಿದ್ದುಪಡಿಗೆ ಸೂಚಿಸಿತ್ತು. ಆದರೆ, ಸಲಿಂಗಕಾಮದ ನೆಪದಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದೆ ಎಂದು ಗೃಹ ಸಚಿವಾಲಯ ಅಂಕಿಅಂಶಗಳನ್ನು ಸಲ್ಲಿಸಿದೆ.












Click it and Unblock the Notifications