ನಾಯಿ ಕಚ್ಚಿದ್ದಕ್ಕೆ ನಿರೂಪಕಿಯ ತುಟಿ ಮೂಗಿಗೆ 70 ಹೊಲಿಗೆ
ವಾಷಿಂಗ್ಟನ್,ಫೆ.16:
ಕಳೆದ ವಾರ ನಾಯಿಯಿಂದ ಮುಖ ಕಚ್ಚಿಸಿಕೊಂಡಿದ್ದ KUSA-TV ಟಿವಿ ವಾಹಿನಿಯ ನಿರೂಪಕಿಯ ಮುಖಕ್ಕೆ ಬರೋಬ್ಬರಿ 70 ಹೊಲಿಗೆ ಹಾಕಲಾಗಿದೆ. ಆಸ್ಪತ್ರೆಯಲ್ಲಿ ಆಕೆಯ ತುಟಿಗಳು ಮತ್ತು ಮೂಗಿಗೆ 70 ಹೊಲಿಗೆ ಹಾಕಲಾಗಿದೆ ಎಂದು ದಿ ಡೈಲಿ ಮೇಲ್ ವರದಿ ಮಾಡಿದೆ. id="toptextpromo">KUSA-TV
ಟಿವಿ ಚಾನೆಲ್ ನಿರೂಪಕಿ ಕೈಲ್ ಡೈರ್ ಬೆಳಗಿನ ವೇಳೆಯಲ್ಲಿ ನೇರ ಪ್ರಸಾರ ಕಾರ್ಯಕ್ರಮ ನಡೆಸಿಕೊಡುವಾಗ 38.5 ಕೆಜಿ ತೂಕದ ಬಲಶಾಲಿ (ಅರ್ಜೆಂಟಿನಾ ಮ್ಯಾಸ್ಟಿಫ್) ನಾಯಿಯನ್ನು ಮುದ್ದು ಮಾಡಲು ಬಗ್ಗಿದ್ದರು. ಆಗ ಅದು ಅವರ ಮುಖವನ್ನು ಬಲವಾಗಿ ಕಚ್ಚಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. id='are-slot-1' class='oiad oi-axt oiadv'> id='top-searched-articles'>'ನನ್ನ
ಬಾಯಿಗೆ ಬೀಗ ಬಿದ್ದಿದೆ. ಮಾತನಾಡೋಕ್ಕೆ ಆಗ್ತಿಲ್ಲ. ತುಟಿಯಲ್ಲಿ ರಕ್ತ ಚಲನೆಯೇ ಇಲ್ಲ' ಎಂದು KUSA-TV ಟಿವಿ ವಾಹಿನಿಯ ನಿರೂಪಕಿ ಡೈರ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಮುಂದಿನ ವಾರ ಇಂತಹುದೇ ಮತ್ತೊಂದು ಚಿಕಿತ್ಸೆ ನಡೆಯಲಿದೆ. ಕುತೂಹಲದ ಸಂಗತಿಯೆಂದರೆ ನೇರ ಪ್ರಸಾರ ವೇಳೆ ನಿರೂಪಕಿ ಡೈರ್ ನಾಯಿಯ ತಲೆಯನ್ನು ಸವರುತ್ತಿದ್ದರು!











Click it and Unblock the Notifications