ಮೂವರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್
ಬೆಂಗಳೂರು,
ಫೆ. 11: ಸದನದಲ್ಲಿ ಬ್ಲೂ ಫಿಲಂ ವೀಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್ ಮತ್ತು ಕೃಷ್ಣ ಪಾಲೇಮರ್ ಅವರಿಗೆ ವಿವರಣೆ ಕೇಳಿ ಶೋಕಾಸ್ ನೋಟಿಸ್ ಜಾರಿ ಮಡಲಾಗಿದೆ. id="toptextpromo">ನಗರದಲ್ಲಿ
ಈ ಕುರಿತು ಹೇಳಿಕೆ ನೀಡಿರುವ ಸ್ಪೀಕರ್ ಕೆ.ಜಿ.ಬೋಪಯ್ಯ ಬ್ಲೂ ಫಿಲಂ ವೀಕ್ಷಿಸಿದ ಪ್ರಕರಣ ಕುರಿತು ವಿವರ ನೀಡಬೇಕೆಂದು ಶೋಕಾಸ್ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ಹೇಳಿದರು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭೆ ಅಧಿವೇಶನದಲ್ಲಿ ಬೋಪಯ್ಯ ಅವರು ಈ ಮೂವರು ಮಾಜಿ ಸಚಿವರಿಗೆ ವಿವರಣೆ ಕೇಳಿ ನೋಟಿಸ್ ನೀಡಿರುವುದಾಗಿ ಪ್ರಕಟಿಸಿದರು. id='are-slot-1' class='oiad oi-axt oiadv'> id='top-searched-articles'>ಈ
ಮೂವರು ಮಾಜಿ ಸಚಿವರು ನೀಡಿದ ಉತ್ತರವನ್ನು ಸದನ ಸಮಿತಿಗೆ ರವಾನಿಸಲಾಗುತ್ತದೆ ಎಂದು ಹೇಳಿದರು. ವಿಧಾನಸಭೆಯಲ್ಲಿ ಗಂಭೀರ ವಿಷಯ ಕುರಿತು ಚರ್ಚೆ ನಡೆಸುತ್ತಿರಬೇಕಾದರೆ ಮೊಬೈಲ್‌ನಲ್ಲಿ ಸವದಿ ಮತ್ತು ಸಿ.ಸಿ.ಪಾಟೀಲ್ ಬ್ಲೂಫಿಲಂ ವೀಕ್ಷಿಸಿದ ಪ್ರಕರಣ ರಾಜ್ಯಾದ್ಯಂತ ಕೋಲಾಹಲಕ್ಕೆ ಕಾರಣವಾಗಿತ್ತು. ಫೆಬ್ರವರಿ 13ರೊಳಗೆ ವಿವರಣೆ ನೀಡುವಂತೆ ಸ್ಪೀಕರ್ ಈಗಾಗಲೇ ಸೂಚನೆ ನೀಡಿದ್ದಾರೆ. ಇಂದು ಅಧಿಕೃತವಾಗಿ ಮೂವರು ಶಾಸಕರಿಗೆ ಶೋಕಾಸ್ ನೋಟಿಸ್ ಜಾರಿ ಮಡಲಾಗಿದೆ. (ಏಜೆನ್ಸೀಸ್)











Click it and Unblock the Notifications