ಸಿಎಂ ಆರೋಗ್ಯದಲ್ಲಿ ಏರುಪೇರು; 2 ದಿನ ಬೆಡ್ ರೆಸ್ಟ್
ಬೆಂಗಳೂರು,
ಫೆ.11: ಅತಿಯಾದ ಕೆಲಸದ ಒತ್ತಡ ಹಾಗೂ ಹವಾಮಾನ ಬದಲಾವಣೆಯಿಂದ ಮುಖ್ಯಮಂತ್ರಿ ಸದಾನಂದಗೌಡ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಶುಕ್ರವಾರ (ಫೆ.10) ಅವರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಶೀತಜ್ವರದಿಂದ ಸಿಎಂ ಬಳಲುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. id="toptextpromo">ಸಿಎಂರನ್ನು
ಪರೀಕ್ಷಿಸಿದ ವೈದ್ಯರು ಎರಡು ದಿನ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಹಾಗಾಗಿ ಶನಿವಾರ (ಫೆ.11) ಹಾಗೂ ಭಾನುವಾರದ (ಫೆ.12) ಸಿಎಂ ಕಾರ್ಯಕ್ರಮಗಳು ರದ್ದಾಗಿವೆ. ಅನಾರೋಗ್ಯದ ನಡುವೆಯೂ ಶುಕ್ರವಾರ ಸಿಎಂ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. id='are-slot-1' class='oiad oi-axt oiadv'> id='top-searched-articles'>ಬೌರಿಂಗ್
ಆಸ್ಪತ್ರೆ ವೈದ್ಯರಾದ ಡಾ. ಸತೀಶ್ ಚಂದ್ರ ಹಾಗೂ ಡಾ.ರವಿ ಅವರು ಸಿಎಂರ ಆರೋಗ್ಯ ತಪಾಸಣೆ ಮಾಡಿ ಹೊಟ್ಟೆ ಭಾಗದ ಸಿಟಿ ಸ್ಕ್ಯಾನಿಂಗ್ ಮಾಡಿದರು. ಸೂಕ್ತ ಔಷದೋಪಚಾರ ನೀಡಿ ಎರಡು ದಿನ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. (ಏಜೆನ್ಸೀಸ್)











Click it and Unblock the Notifications