ಬೆಂಗಳೂರಿನಲ್ಲಿ 6 ವರ್ಷದ ಬಾಲಕಿಯ ಬಲಾತ್ಕಾರ, ಹತ್ಯೆ
ಬೆಂಗಳೂರು,
ಫೆ. 11 : 6 ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಬರ್ಬರವಾಗಿ ಹತ್ಯೆಗೈದು, ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಬಿಸಾಕಿ ಹೋದ ಘಟನೆ ಶನಿವಾರ ನಗರದಲ್ಲಿ ಬೆಳಕಿಗೆ ಬಂದಿದೆ. id="toptextpromo">ಬಾಲಕಿಯ
ಪಾಲಕರು ಬಳ್ಳಾರಿ ಜಿಲ್ಲೆಯ ಶಿರಗುಪ್ಪದವರಾಗಿದ್ದು ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಪಾಲಕರಿಗೆ ಎರಡು ವರ್ಷದ ಗಂಡು ಮಗು ಕೂಡ ಇದ್ದು, ಮಗುವನ್ನು ನೋಡಿಕೊಳ್ಳಲು ಬಾಲಕಿಗೆ ಬಿಟ್ಟು ಕೆಲಸಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. id='are-slot-1' class='oiad oi-axt oiadv'> id='top-searched-articles'>ಶುಕ್ರವಾರ
ಸಂಜೆ ಬಾಲಕಿಯ ಪಾಲಕರು ಮನೆಗೆ ಮರಳಿದಾಗ ಮಗಳು ನಾಪತ್ತೆಯಾಗಿದ್ದಾಳೆ. ಎಲ್ಲ ಕಡೆ ಹುಡುಕಿ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ರಾತ್ರಿ ಪೊಲೀಸರು ಹುಡುಕಿದಾಗ ಹತ್ತಿರದಲ್ಲಿದ್ದ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಬಾಲಕಿಯ ದೇಹ ದೊರೆತಿದೆ.











Click it and Unblock the Notifications