ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಸಾವಿರ ಕೋಟಿ ಅವ್ಯವಹಾರದಲ್ಲಿ ಆಚಾರ್ಯ

By Mahesh
|
Google Oneindia Kannada News

Complaint on BV Acharya
ಬೆಂಗಳೂರು, ಫೆ.9: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಬಿಎಂಎಸ್ ಕಾಲೇಜಿನ ಶಿಕ್ಷಣ ಟ್ರಸ್ಟ್ ನಲ್ಲಿ ನಡೆದಿರುವ ಅವ್ಯವಹಾರಗಳಲ್ಲಿ ಅಡ್ವೋಕೇಟ್ ಬಿವಿ ಅಚಾರ್ಯ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ.

ಬಿಎಂಎಸ್ ಶಿಕ್ಷಣ ಟ್ರಸ್ಟ್ ನ ಟ್ರಸ್ಟಿಯಾಗಿರುವ ಬಿವಿ ಆಚಾರ್ಯ ಜೊತೆಗೆ ಉದ್ಯಮಿ ಪಿ ದಯಾನಂದ ಪೈ ಹಾಗೂ ಇತರೆ ಮೂವರು ಸದಸ್ಯರನ್ನು ಕೂಡಾ ಆರೋಪಿಗಳು ಎಂದು ಹೆಸರಿಸಿ ಎನ್ ವೆಂಕಟಾಚಲಯ್ಯ ಎಂಬುವರು ದೂರು ನೀಡಿದ್ದಾರೆ.

ಲಕ್ಷ್ಮಮ್ಮ ಬಿಎಂ ಶ್ರೀನಿವಾಸಯ್ಯ ದಾನ ದತ್ತಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಆಗಿರುವ ವೆಂಕಟಾಚಲಯ್ಯ ಅವರು ಭ್ರಷ್ಟಾಚಾರ ಕಾಯ್ದೆಯಡಿಯಲ್ಲಿ ಆಚಾರ್ಯ ಸೇರಿದಂತೆ ಸಹ ಆರೊಪಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಕೋರ್ಟ್ ಮೊರೆ ಹೋಗಿದ್ದಾರೆ.

ಬಿವಿ ಆಚಾರ್ಯ, ಎಚ್ ಯು ತಳವಾರ್, ಬಿಎಸ್ ರಾಗಿಣಿ ನಾರಾಯಣ್, ಪಿ ದಯಾನಂದ ಪೈ ಹಾಗೂ ವಿಜಯ್ ಗೋರೆ ಅವರು ಟ್ರಸ್ಟ್ ಹಣವನ್ನು ನುಂಗಿ ಹಾಕಿದ್ದಾರೆ. ಧರ್ಮಪ್ರಕಾಶ ರಾಜಕಾರ್ಯಪ್ರಸಕ್ತ ಬಿಎಂ ಶ್ರೀನಿವಾಸಯ್ಯ ಶಿಕ್ಷಣ ಟ್ರಸ್ಟ್ ನ ಮೌಲ್ಯ ಸುಮಾರು 10,000 ಕೋಟಿ ದಾಟಲಿದೆ. ಅದರೆ, ಆರೋಪಿಗಳು ಇನ್ನೂ ಹೆಚ್ಚಿನ ಹಣವನ್ನು ನುಂಗಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ದೇವೇಗೌಡರ ಗುಡುಗು: 2009ರಲ್ಲಿ ಟ್ರಸ್ಟ್ ಸದಸ್ಯರನ್ನು ಬದಲಾಯಿಸಿದ ನಂತರ ಈ ಅವ್ಯವಹಾರ ಹೆಚ್ಚಾಗಿದೆ. ಚೆಕ್ ಗಳು ಬೇರೆ ಬೇರೆ ಖಾತೆಗಳಿಗೆ ರವಾನಿಸಲಾಗಿದೆ. ರಾಗಿಣಿ ನಾರಾಯಣ್ ಅವರ ಸದಸ್ಯತ್ವದ ಬಗ್ಗೆ ಕೂಡಾ ಅನುಮಾನವಿದೆ. ವೆಂಕಟಾಚಲಯ್ಯ ಅವರು ಮಾಡಿರುವ ಅರೋಪಗಳು ಸರಿಯಾಗಿದೆ. ಆಚಾರ್ಯ ಅವರು ಪ್ರತಿಕ್ರಯೆ ನೀಡಿದರೆ ನುಣುಚಿಕೊಳ್ಳುವುದು ಸರಿಯಲ್ಲ ಎಂದು ದೇವೇಗೌಡರು ಹೇಳಿದ್ದರು.

English summary
BMS Education Trust Golmaal: Senior advocate B.V. Acharya is also the chairman of the B.M.S Education Trust along with businessman P. Dayananda Pai and others three members of the Trust are facing private complaint against them. Former PM HD Deve Gowda alleged the trust golmaal cost crosses over Rs.10000 Cr.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X