ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿ ಮನೆಯಿಂದ ಹೊರಬಿದ್ದ, ಆಚಾರ್ಯ ರಾಜೀನಾಮೆ

By Mahesh
|
Google Oneindia Kannada News

BV Acharya
ಬೆಂಗಳೂರು, ಫೆ.9: ಹಿರಿಯ ಅಡ್ವೋಕೇಟ್ ಬಿವಿ ಆಚಾರ್ಯ ಅವರು ಇದ್ದಕ್ಕಿದ್ದಂತೆ ರಾಜ್ಯದ ಅಡ್ವೋಕೇಟ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬುಧವಾರ ಸಂಜೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನೆಗೆ ತೆರಳಿದ್ದ ಆಚಾರ್ಯ ಅವರು ನಂತರ ತಮ್ಮ ರಾಜೀನಾಮೆ ಬಗ್ಗೆ ಪ್ರಕಟಿಸಿದ್ದಾರೆ.

ಅಕ್ರಮ ಆಸ್ತಿ ಆರೋಪ ಹೊತ್ತಿರುವ ಜಯಲಲಿತಾ ಪ್ರಕರಣದಲ್ಲಿ ಬಿವಿ ಆಚಾರ್ಯ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಲು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಇಚ್ಛಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ವಿಶೇಷ ಕೋರ್ಟ್ ನಲ್ಲಿ ತಮಿಳುನಾಡಿನ ಗುಪ್ತಚರ ಹಾಗೂ ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯವನ್ನು ಆಚಾರ್ಯ ಅವರು ಪ್ರತಿನಿಧಿಸಿದ್ದರು. ಎಜಿ ಹುದ್ದೆ ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ಎರಡರಲ್ಲಿ ಒಂದು ಹುದ್ದೆಯನ್ನು ಮಾತ್ರ ಆಯ್ಕೆ ಮಾಡುವಂತೆ ಆಚಾರ್ಯರ ಮೇಲೆ ಒತ್ತಡ ಹೇರಲಾಗಿತ್ತು.

ಕೊನೆಗೆ 78 ವರ್ಷದ ಆಚಾರ್ಯ ಅವರನ್ನು ಜಯಲಲಿತಾ ಅವರ ಅಕ್ರಮ ಆಸ್ತಿ ವಿಚಾರಣೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಈ ಹಿಂದೆ ಹೈಕೋರ್ಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪರ ಆಚಾರ್ಯ ವಾದಿಸಿದ್ದರು.

ಎಜಿ ಇಂದ ಪಿಪಿಯಾದ ಆಚಾರ್ಯ ಮೇಲೆ 10,000 ಕೋಟಿ ನುಂಗಿದ ಆರೋಪವಿದೆ. ಆಚಾರ್ಯ ಹೆಸರೆತ್ತಿದರೆ ಮಾಜಿ ಪ್ರಧಾನಿ ದೇವೇಗೌಡರು ಉರಿದು ಬೀಳುವುದೇಕೆ? ಮುಂದೆ ಓದಿ...

English summary
Senior advocate B.V. Acharya quits as Karnataka Advocate General. He may become Special Public Prosecutor in the case related to Tamil Nadu Chief Minister J. Jayalalithaa case before a special court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X