ಮೊಬೈಲ್‌ಗ‌ಳಲ್ಲಿ ಪುರಾಣ ಕಥೆ ಕೇಳಬೇಕೇ?

utv-interactive-offers-mythological-stories-in-mobile-sets
ಚೆನ್ನೈ, ಫೆ.8: ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರದ ಮೂಡಿನಲ್ಲಿರುವ ಮಹಾಜನತೆಗೆ ಮೊಬೈಲ್‌ಗ‌ಳಲ್ಲಿ ಪುರಾಣ ಕಥೆಗಳು ಬರಲಿದೆ ಎಂದು ಹೇಳಿದರೆ ಈಗಾಗ್ಲೇ ಬರ್ತಿದೆ ಅಲ್ಲ ರಂಪರಾಮಾಯಣಗಳು ಮತ್ತಿನ್ಯಾವ ಪುರಾಣಗಳು ಎಂದು ಪ್ರಶ್ನಿಸುವುದು ಸಹಜ.

ಆದರೆ ಈ ಮೊಬೈಲ್ ಕಾಮಾಯಣದಲ್ಲಿ ಮನಸು ರಾಡಿ ಮಾಡಿಕೊಳ್ಳದೆ ಸನ್ಮಾರ್ಗದಲ್ಲಿ ನಡೆಯುವಂತಾಗಲಿ ಎಂದು ಪ್ರಸಿದ್ಧ ಪುರಾಣ ಕತೆಗಳು ಇನ್ನು ಮುಂದೆ ಮೊಬೈಲ್‌ ಫೋನ್‌ಗಳಲ್ಲಿ ಲಭ್ಯವಾಗಲಿವೆ. ಮೊಬೈಲ್ ಕಂಪನಿಗಳ ಹೊಸ ಮೌಲ್ಯವರ್ಧಿತ ಸೇವೆ. ಸೋ, ರಾಮ, ಕೃಷ್ಣ, ವಿಷ್ಣು, ಶನಿಮಹಾತ್ಮ, ಸಾಯಿಬಾಬಾ, ಗಣೇಶ, ದುರ್ಗಾ ಕುರಿತಾದ ಪುರಾಣದ ರಮ್ಯ ಕಥೆಗಳನ್ನು ಕೇಳುವ ಭಾಗ್ಯ ನಿಮ್ಮದಾಗಲಿದೆ. ನಿಮ್ಮ ಕೈಯಲ್ಲಿರುವ ಪುಟ್ಟ ಮೊಬೈಲ್‌ ಸಾಧನವೇ ಕಥೆ ಹೇಳುವ ಅಜ್ಜಿಯ ಪಾತ್ರವನ್ನು ನಿಭಾಯಿಸಲಿದೆ.

ಯುಟಿವಿ ಕಂಪನಿಯ ಡಿಜಿಟಲ್‌ ವಿಭಾಗವಾದ ಯುಟಿವಿ ಇಂಟರ್ ಆಕ್ಟಿವ್‌ 'ದಿವ್ಯ ಕಥಾಯೇಂ' ಎನ್ನುವ ಆಡಿಯೋ ಉತ್ಪನ್ನವನ್ನು ಪ್ರಾರಂಭಿಸಿದೆ. ಸುಮಾರು 10 ನಿಮಷ ಅವಧಿಯ ಈ ಕತೆಗಳನ್ನು ಮೊಬೈಲ್‌ನಲ್ಲಿ ಕೇಳಿ ಆನಂದಿಸಬಹುದು. ಎಲ್ಲ ಮೊಬೈಲ್‌ ಸೇವಾದಾರ ಕಂಪನಿಗಳ ಸೇವೆಯಲ್ಲಿ ಈ ಪುರಾಣ ಕಥೆಗಳು ಲಭ್ಯ.

ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂ, ಒರಿಯಾ ಮತ್ತು ಬಂಗಾಳಿ ಭಾಷೆಗಳಲ್ಲಿ ದಿವ್ಯ ಕಥಾಯೇಂ ಇದೆ. ಆದರೆ, ಒಂದು ತಿಂಗಳಲ್ಲಿ ಎರಡು ಕತೆಗಳನ್ನು ಕೇಳಿದರೆ 30 ರೂ. ಪಾವತಿಸಬೇಕಾಗುತ್ತದೆ. ಸದ್ಯಕ್ಕೆ ಆರು ಕಥೆಗಳನ್ನು ಪ್ರಾರಂಭಿಸಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ಹೊಸ ಕಥೆಗಳು ಹರಿದುಬರಲಿವೆ.
ಇದಕ್ಕೆ ಚಂದಾದಾರರಾಗಲು ಈ ಸಂಖ್ಯೆಗಳಿಗೆ ಕರೆ ಮಾಡಿ: 50787 (Airtel and BSNL) and 56694222 (Reliance).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+