ಕರೆಂಟ್ ಇಲ್ಲ,ಪೇಪರ್ ಇಲ್ಲ, ಸವದಿ ಸ್ವಕ್ಷೇತ್ರ ಟೋಟಲ್ ಬಂದ್
ಅಥಣಿ,
ಫೆ 8: ಮಾಜಿ ಸಚಿವ ಲಕ್ಷ್ಮಣ್ ಸವದಿ ಪ್ರತಿನಿಧಿಸುವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ವಿರೋಧ ಪಕ್ಷಗಳು ಕರೆನೀಡಿದ್ದ ಬಂದ್ ಗೆ ಸಾರ್ವಜನಿಕರಿಂದ ಇದೀಗ ಬಂದ ವರದಿಗಳ ಪ್ರಕಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಬಂದ್ ಗೆ ಕರೆನೀಡಿವೆ. id="toptextpromo">ಅತ್ಯಂತ
ವಿಪರ್ಯಾಸದ ಸಂಗತಿ ಏನೆಂದರೆ, ಅಥಣಿ ಟೌನ್ ನಲ್ಲಿ ವಿದ್ಯುತ್ ಮತ್ತು ದಿನಪತ್ರಿಕೆ ಸರಬರಾಜು ಸಂಪೂರ್ಣ ಬಂದ್ ಆಗಿದ್ದು, ಸವದಿ ಬೆಂಬಲಿಗರು ಇವೆರಡಕ್ಕೂ ತಡೆಯೊಡ್ಡಿದ್ದಾರೆಂದು ಅನಧಿಕೃತ ಮೂಲಗಳಿಂದ ವರದಿಯಾಗಿದೆ. id='are-slot-1' class='oiad oi-axt oiadv'> id='top-searched-articles'>ಗೋಕಾಕ್
ಪಟ್ಟಣದಿಂದ ಯಾವುದೇ ದಿನಪತ್ರಿಕೆಗಳು ಅಥಣಿ ಕಡೆ ಹೋಗುತ್ತಿಲ್ಲ. ಬೆಳಗಾವಿಯಿಂದ 150 ಕಿ.ಮೀ ದೂರದಲ್ಲಿರುವ ಅಥಣಿ ಪಟ್ಟಣವನ್ನು ಸಚಿವ ಲಕ್ಷಣ್ ಸವದಿ ಪ್ರತಿನಿದಿಸುತ್ತಿದ್ದಾರೆ. ತನ್ನ ಕ್ಷೇತ್ರದಲ್ಲಿ ಆಗುವ ಇನ್ನಷ್ಟು ಅವಮಾನಗಳಿಂದ ತಪ್ಪಿಸಲು ಸವದಿ ಹುಕುಂ ಮೇರೆಗೆ ಅವರ ಬೆಂಬಲಿಗರು ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.











Click it and Unblock the Notifications