2ಜಿ: ಸೋನಿಯಾ ತಂಗಿಯರಿಗೆ ಸಿಕ್ಕಿದ್ದು 18000ಕೋಟಿ

2G: Sonia Gandhi sisters kickbacks
ನವದೆಹಲಿ, ಫೆ.7: 2ಜಿ ಹಗರಣದಲ್ಲಿ ಯುಪಿಎ ಸರ್ಕಾರಕ್ಕೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯ ಸ್ವಾಮಿ ಅವರ ಮುಂದಿನ ಸೋನಿಯಾ ಗಾಂಧಿ ಅಷ್ಟೇ ಅಲ್ಲ. ಅವರ ತಂಗಿಯರು ಕೂಡಾ 2ಜಿ ಹಗರಣದ ಲಾಭ ಪಡೆದಿದ್ದಾರೆ ಎನ್ನಲಾಗಿದೆ.

2ಜಿ ಹಗರಣದಲ್ಲಿ ಚಿದಂಬರಂ ಭಾಗಿಯಾಗಿರುವುದು ಎಷ್ಟೋ ನಿಜವೋ, ಅದೇ ರೀತಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತಂಗಿಯರಾದ ನಾಡಿಯಾ ಮತ್ತು ಅನುಷ್ಕಾ ಕೂಡಾ ಭಾಗಿಯಾಗಿದ್ದಾರೆ. ಆದರೆ, ಈ ಬಗ್ಗೆ ಸಾಕಷ್ಟು ಪುರಾವೆಗಳಿಲ್ಲ. ಆದರೆ, ಸೋನಿಯಾ ತಂಗಿಯರಿಗೆ 18,000 ಕೋಟಿ ರು ಲಾಭವಾಗಿರುವುದಂತೂ ನಿಜ ಎಂದು ಸ್ವಾಮಿ ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರು ದುಬೈ, ಮಲೇಷಿಯಾ ಮತ್ತು ಹಾಂಗ್ ಕಾಂಗೆ ಗೆ ಪ್ರವಾಸ ಮಾಡುವುದರ ಜೊತೆ ಯುರೋಪ್ ನ ಪ್ರಮುಖ ದೇಶಗಳಿಗೆ ಹೋಗುತ್ತಿರುವುದೇಕೆ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ.

ಖಾಸಗಿ ಕಂಪನಿಗಳ ಚಾರ್ಟರ್ ವಿಮಾನದಲ್ಲೇ ಆಕೆ ಪ್ರಯಾಣ ಮಾಡುತ್ತಿದ್ದಾರೆ. 2ಜಿ ಹಗರಣದಲ್ಲಿ ಆರೋಪ ಹೊತ್ತಿರುವ ಕಂಪನಿಗಳ ಮಾಲೀಕತ್ವದ ವಿಮಾನಗಳಲ್ಲೇ ಆಕೆ ಪ್ರವಾಸ ಕೈಗೊಳ್ಳುತ್ತಿರುವುದು ಗಮನಾರ್ಹ.

ಪಿ ಚಿದಂಬರಂ ವಿರುದ್ಧ ಸೂಕ್ತ ಸಾಕ್ಷ್ಯ ಒದಗಿಸಿ ಮತ್ತೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬರುವಂತೆ ಮಾಡುತ್ತೇನೆ. ನಂತರ ಸೋನಿಯಾ ಹಾಗೂ ಅವರ ಕುಟುಂಬದ ಸರದಿ ಎಂದು ಸ್ವಾಮಿ ವೆಬ್ ತಾಣವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+