ಅಕ್ಕ ಮಳೆಗಾಲದ ಕಪ್ಪೆ; ತಮ್ಮ ಸಾರ್ವಕಾಲಿಕ ಕಪ್ಪೆ
ವಾರಣಾಸಿ,ಫೆ.7:
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ ಕಾಂಗ್ರೆಸ್ ಯುವನಾಯಕಿ ಪ್ರಿಯಾಂಕ ಗಾಂಧಿ ತಾನು 'ಮಳೆಗಾಲದ ಕಪ್ಪೆ' ಅಂತ ಹೇಳಿದ್ದೇ ತಡ ಅವರ ತಮ್ಮ, ಕಾಂಗ್ರೆಸ್ಸಿನ ಯುವರಾಜ ರಾಹುಲ್ ಗಾಂಧಿ ಅವರು 'ಪ್ರಿಯಾಂಕ ಕಪ್ಪೆಯಾದರೆ ನಾನು ಕೂಡ ಕಪ್ಪೆ. ಯಾಕೆಂದರೆ ನಾನು ಆಕೆಯ ತಮ್ಮ' ಎಂದು ಮುಗ್ಧವಾಗಿ ಉತ್ತರಿಸಿದ್ದಾರೆ. id="toptextpromo">ಪ್ರಿಯಾಂಕ
ಗಾಂಧಿಯ ಕಪ್ಪೆಯ ಹೇಳಿಕೆಯನ್ನು ಹಿಡಿದುಕೊಂಡು ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾದಿದ್ದ ಪತ್ರಕರ್ತರನ್ನು ರಾಹುಲ್ ತನ್ನ ವಿನೋದದ ಉತ್ತರದಿಂದ ನಿಶ್ಶಸ್ತ್ರರನ್ನಾಗಿಸಿದರು. ಸಹೋದರಿಯ 'ಬರ್ಸಾತಿ ಮೆಂಡಕ್' (ಮಳೆಗಾಲದ ಕಪ್ಪೆ) ಹೇಳಿಕೆಗೆ ಪ್ರತಿಕ್ರಿಯೆ ಕೇಳಿದಾಗ ರಾಹುಲ್ ನೀಡಿದ ಉತ್ತರದಿಂದ ಅಲ್ಲಿ ನಗೆಯುಕ್ಕಿ ತುಸು ಹೊತ್ತು ಹಾಸ್ಯದ ವಾತಾವರಣ ಉಂಟಾಯಿತು. id='are-slot-1' class='oiad oi-axt oiadv'> id='top-searched-articles'>ಅಪರೂಪಕ್ಕೊಮ್ಮೆ
ಉತ್ತರ ಪ್ರದೇಶಕ್ಕೆ ಬರುವ ತನ್ನನ್ನು ಪ್ರಿಯಾಂಕ ಚುನಾವಣಾ ಸಭೆಯೊಂದರಲ್ಲಿ ಮಳೆಗಾಲದ ಕಪ್ಪೆಗೆ ಹೋಲಿಸಿಕೊಂಡಿದ್ದಾರೆ. ನಾನು ಅಪರೂಪಕ್ಕೊಮ್ಮೆ ಬರುತ್ತೇನೆ. ಆದರೆ ರಾಹುಲ್ ಸದಾ ನಿಮ್ಮ ಜತೆಗಿರುತ್ತಾರೆ. ನಾನು ಚುನಾವಣೆ ಘೋಷಣೆಯಾದಾಗ ಮಾತ್ರ ರಾಯ್‌ಬರೇಲಿ ಮತ್ತು ಅಮೇಠಿಗೆ ಬರುವುದು ಎಲ್ಲರಿಗೂ ತಿಳಿದ ಸಂಗತಿ. ಇದರಲ್ಲಿ ಮುಚ್ಚಿಡುವುದು ಏನೂ ಇಲ್ಲ. ನಾನು ಮಳೆಗಾಲದ ಕಪ್ಪೆಯಂತೆ ಎಂದು ಪ್ರಿಯಾಂಕ ತಮ್ಮನ್ನು ಬಣ್ಣಿಸಿಕೊಂಡಿದ್ದಾರೆ.











Click it and Unblock the Notifications