ಫೆ.11ರಂದು ದಕ್ಷಿಣ ಬೆಂಗಳೂರು ಫುಲ್ ಕತ್ತಲೆ

ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಜಯದೇವ MUSS66/11KV ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದನ್ನು ರಿಪೇರಿ ಮಾಡಲು ಶನಿವಾರ ಫೆ.11ರಂದು ಈ ಭಾಗಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತ ಅನಿವಾರ್ಯ ಎಂದು ಬೆಸ್ಕಾಂ ಪ್ರಕಟಿಸಿದೆ. ಫೆ.11ರಂದು ಕೆಳಕಂಡ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವೆಗೆ ಅಥವಾ ಇನ್ನೂ ಎರಡು ಗಂಟೆ ಹೆಚ್ಚಿಗೆ ಕರೆಂಟ್ ಇರುವುದಿಲ್ಲ.
ಬಿಟಿಎಂ ಲೇಔಟ್ 1 ಹಾಗೂ 2 ನೇ ಹಂತ, ಮೈಕೋ ಬಡಾವಣೆ, ಸಿಲ್ಕ್ ಬೋರ್ಡ್, ಎನ್ ಎಸ್ ಪಾಳ್ಯ, ಶಾಪರ್ಸ್ ಸ್ಟಾಪ್, ಕೆಎಎಸ್ ಹಾಗೂ ಐಎಎಸ್ ಲೇಔಟ್, ಜಯದೇವ ಆಸ್ಪತ್ರೆ, ರಂಕಾ ಕಾಲೋನಿ, ಮಂತ್ರಿ ಅಪಾರ್ಟ್ಮೆಂಟ್, MORE ಶಾಪ್, ಸುರಭಿ ಅಪಾರ್ಟ್ಮೆಂಟ್, ಬನ್ನೇರುಘಟ್ಟ ರಸ್ತೆ, ಹೊಸ ಗುರಪ್ಪನ ಪಾಳು, ಮಾರುತಿ ಹೌಸಿಂಗ್ ಸೊಸೈಟಿ ಲೇಔಟ್ ಹಾಗೂ
ಜಯನಗರ 4ನೇ ಟಿ ಬ್ಲಾಕ್, ಜಯನಗರ 11ನೇ ಮುಖ್ಯರಸ್ತೆ, 5ನೇ ಬ್ಲಾಕ್, ಜಯನಗರ 9ನೇ ಬ್ಲಾಕ್, ತಿಲಕ್ ನಗರ, ಎಸ್ ಆರ್ ಕೆ ಗಾರ್ಡನ್, ಭೈರಸಂದ್ರ, ಜಯನಗರ 3ನೇ ಬ್ಲಾಕ್, ಎಲ್ ಐಸಿ ಕಾಲೋನಿ ಕೆಲ ಭಾಗಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ.












Click it and Unblock the Notifications