ಚಿನ್ನದ ಬೆಲೆ ದಿಢೀರ್ ತೀವ್ರ ಕುಸಿತ

ದಿಢೀರ್ ಕುಸಿತಕ್ಕೆ ಕಾರಣವೇನು?: ಕಳೆದ ಐದು ವಾರಗಳಿಂದ ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿರಂತರವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಆತಂಕಗೊಂಡ ದಾಸ್ತಾನುಗಾರರು ಚಿನ್ನವನ್ನು ಭಾರೀ ಪ್ರಮಾಣದಲ್ಲಿ ಮಾರಾಟ ಮಾಡತೊಡಗಿದರು. ಇದರ ಜೊತೆಗೆ ಜನವರಿಯಲ್ಲಿ ಅಮೆರಿಕದ ಆರ್ಥಿಕತೆಯು ಅಧಿಕ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಆ ದೇಶದ ಆರ್ಥಿಕ ಬೆಳವಣಿಗೆಯು ಉತ್ತಮಗೊಳ್ಳುತ್ತಿರುವ ಸಂಕೇತವನ್ನು ನೀಡಿದೆ.
ಈ ವಿದ್ಯಾಮಾನದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಅಪಾರ ಪ್ರಮಾಣದಲ್ಲಿ ಚಿನ್ನವನ್ನು ಅಪದ್ಧನವಾಗಿ ದಾಸ್ತಾನು ಮಾಡುವ ಅಗತ್ಯವನ್ನು ಕುಗ್ಗಿಸಿದೆ. ಹೀಗಾಗಿ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಚಿನ್ನ ದಾಸ್ತಾನು ಮಾರಾಟಕ್ಕೆ ಹರಿದುಬಂದುದೇ ಈ ಹಳದಿಲೋಹದ ಬೆಲೆಯಲ್ಲಿ ಗಣನೀಯ ಕುಸಿತವಾಗಲು ಕಾರಣವೆನ್ನಲಾಗಿದೆ.
ಭಾರತದ ಮಾರುಕಟ್ಟೆಯಲ್ಲಿ 99.9 ಶೇ. ಹಾಗೂ 99.5 ಶೇ. ಪರಿಶುದ್ಧತೆಯ ಚಿನ್ನದ ಧಾರಣೆ 600 ರೂ.ನಷ್ಟು ಇಳಿಕೆಯಾಗಿದ್ದು , ಪ್ರತಿ ಹತ್ತು ಗ್ರಾಂಗೆ ಅವುಗಳ ಬೆಲೆ ಕ್ರಮವಾಗಿ 28,040 ರೂ. ಹಾಗೂ 27,900 ರೂ.ಗಳಾದವು












Click it and Unblock the Notifications