ಅಶ್ಲೀಲ ಫೋಟೋ ಕ್ಲಿಕ್ಕಿಸಿದ ಬೆಂಗಳೂರು ಟೆಕ್ಕಿ ಬಂಧನ

Bangalore techie arrested for taking obscene photos of girl friend
ಬೆಂಗಳೂರು, ಫೆ. 4 : ಮಾಜಿ ಸಹೋದ್ಯೋಗಿಯ ಅಶ್ಲೀಲ ಫೋಟೋಗಳನ್ನು ಫೇಸ್‌ಬುಕ್ ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿ, ಆಕೆಯನ್ನು ಗೋಳುಹೊಯ್ದುಕೊಂಡ ವಿಕೃತ ಮನಸ್ಸಿನ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರನ್ನು ಸಿಐಡಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರಾಗಿರುವ ಟಿ ಸತೀಶ್ (27) ಬಂಧಿತನಾಗಿರುವ ವ್ಯಕ್ತಿ. ಆತನ ವಿರುದ್ಧ ದೂರು ನೀಡಿದ್ದ ಶೀಲಾ (ಹೆಸರು ಬದಲಿಸಲಾಗಿದೆ) ಕೂಡ ಆ ಕಂಪನಿಯಲ್ಲಿಯೇ ಸಾಫ್ಟ್‌ವೇರ್ ಇಂಜಿನಿಯರಾಗಿ ಕೆಲಸದಲ್ಲಿದ್ದರು.

ಸತೀಶ್ ಶೀಲಾ ಜೊತೆಗೆ ಗೆಳೆತನ ಬೆಳೆಸಿದ್ದಾನೆ. ಆಕೆ ಸಲುಗೆಯಿಂದ ಇದ್ದುದರ ದುರ್ಲಾಭ ಪಡೆದ ಸತೀಶ್ ಆಕೆಯ ಕೆಲ ಅಶ್ಲೀಲ ಚಿತ್ರಗಳನ್ನು ತೆಗೆದಿದ್ದಾನೆ. ಆತನ ವಿಕೃತಿ ಬಯಲಾಗುತ್ತಿದ್ದಂತೆ ಶೀಲಾ ಆತನಿಂದ ದೂರವಾಗಿದ್ದಾಳೆ. ಶೀಲಾ ದೂರವಾಗಿದ್ದರಿಂದ ಬೇಸತ್ತ ಸತೀಶ್ ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾನೆ.

ಶೀಲಾಳ ಈಮೇಲ್ ಐಡಿಯನ್ನು ಹ್ಯಾಕ್ ಮಾಡಿ, ಆಕೆಯ ಸ್ನೇಹಿತರಿಗೆಲ್ಲ ಆಕೆಯ ಅಶ್ಲೀಲ ಫೋಟೋಗಳನ್ನು ಕಳಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೆ ಫೇಸ್‌ಬುಕ್‌ನಲ್ಲಿಯೂ ಅಶ್ಲೀಲ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾನೆ. ಇದು ಸುಮಾರು ಒಂದೂವರೆ ತಿಂಗಳಿನಿಂದ ನಡೆದಿದೆ. ಈ ಎಲ್ಲ ವಿದ್ಯಮಾನದಿಂದ ಮನನೊಂದ ಶೀಲಾ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಕೈಯಲ್ಲಿ ಸಾಕಷ್ಟು ದುಡ್ಡು, ಐಷಾರಾಮಿಯ ನೆಮ್ಮದಿಯ ಬದುಕನ್ನು ಆಯ್ದುಕೊಳ್ಳುವ ಬದಲು ಸತೀಶ್ ಈಗ ಕಂಬಿಎಣಿಸುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+