ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಂತಾಮಣಿ ಬಳಿ ಬೆಂಗಳೂರು ಉತ್ತರ ವಿವಿ ಸ್ಥಾಪನೆ

By Rajendra
|
Google Oneindia Kannada News

Bangalore North University
ಬೆಂಗಳೂರು, ಫೆ.4: ಬೆಂಗಳೂರು ವಿಶ್ವವಿದ್ಯಾಲಯ ಇಬ್ಭಾಗವಾಗುತ್ತಿರುವುದು ಗೊತ್ತೇ ಇದೆ. ಹೊಸ ವಿಶ್ವವಿದ್ಯಾಲಯಕ್ಕೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಎಂದು ಹೆಸರಿಡಲು ಚಿಂತಿಸಲಾಗಿದೆ. ವಿವಿಯ ಕ್ಯಾಂಪಸನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಶ್ರೀನಿವಾಸಪುರ ನಡುವೆ ನಿರ್ಮಿಸಲು ಉದ್ದೇಶಿಸಲಾಗಿದೆ.

ಒಟ್ಟು 300 ಎಕರೆಗಳಿಗೂ ಅಧಿಕ ಪ್ರದೇಶದಲ್ಲಿ ಕ್ಯಾಂಪಸ್ ನಿರ್ಮಿಸಲಾಗುತ್ತದೆ. ಈ ವಿಶ್ವವಿದ್ಯಾಲಯದ ಅಧೀನಕ್ಕೆ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಹೊಸಕೋಟೆ ತಾಲೂಕಿನ 300 ಕಾಲೇಜುಗಳು ಒಳಪಡಲಿವೆ.

ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಹೊಸಕೋಟೆ ಹಾಗೂ ಕೋಲಾರದಿಂದ 30 ಕಿ.ಮೀ ಹಾಗೂ ಚಿಕ್ಕಬಳ್ಳಾಪುರದಿಂದ 35 ಕಿ.ಮೀ ದೂರದಲ್ಲಿರುವ ಸೋಮಯಾಜಲಹಳ್ಳಿ ಬಳಿಯ 321 ಎಕರೆ 4 ಗುಂಟೆ ಜಮೀನು ಹಾಗೂ ಕನಿಶೆಟ್ಟಿಹಳ್ಳಿ ಬಳಿ 245 ಎಕರೆ 35 ಗುಂಟೆ ಜಮೀನನ್ನು ಗುರುತಿಸಲಾಗಿದೆ ಎಂದು ವಿವಿಯ ಕುಲಸಚಿವ (ಆಡಳಿತ) ಬಿಸಿ ಮೈಲಾರಪ್ಪ ತಿಳಿಸಿದ್ದಾರೆ.

ಇದಿಷ್ಟೇ ಅಲ್ಲದೆ ಹೊಸಕೋಟೆ ಬಳಿಯೂ ಹೆಚ್ಚುವರಿ ಜಮೀನನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ವಿಶ್ವವಿದ್ಯಾಲಯಕ್ಕೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಥವಾ ಬೆಂಗಳೂರು ಗ್ರಾಮಾಂತರ ವಿಶ್ವವಿದ್ಯಾಲಯ ಎಂದು ಹೆಸರಿಡಲು ಚಿಂತಿಸಲಾಗಿದೆ ಎಂದು ಕುಲಸಚಿವರು ಹೇಳಿದ್ದಾರೆ. (ಒನ್‌ಇಂಡಿಯಾ ಕನ್ನಡ)

English summary
Bangalore North University (the name that is likely to be chosen) is likely to be set up in Kolar district, between Chintamani and Srinivaspura. The university will be set up on 300-plus acres of government land and will have 300 colleges affiliated to it. The colleges will include those in Kolar, Chikkabalapur and Hoskote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X