ಗಡಾಫಿ ರಕ್ತಸಿಕ್ತ ಶರ್ಟ್ 2 ಮಿಲಿಯನ್ ಗೆ ಹರಾಜು

ಗಡಾಫಿ ಶವದ ಮೇಲಿದ್ದ ರಕ್ತಸಿಕ್ತ ಅಂಗಿ ಹಾಗೂ ಆತನ ಕೈಲಿದ್ದ ಮದುವೆ ಉಂಗುರ (ಬೆಳ್ಳಿಯದ್ದು) ಹರಾಜಿಗೆ ಇಡಲಾಗಿದೆ. 2 ಮಿಲಿಯನ್ ಡಾಲರ್ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದು ಲಿಬಿಯನ್ ನಾಯಕ ಅಹ್ಮದ್ ವಾರ್ಫಾಲಿ ಹೇಳಿದ್ದಾರೆ.
ಆದರೆ, ಗಡಾಫಿ ಅವರಿಗೆ ಸೇರಿದ ವಸ್ತುಗಳನ್ನು ಹರಾಜು ಹಾಕುವುದಕ್ಕೆ ಅನೇಕರ ವಿರೋಧವಿದೆ. ಗಡಾಫಿಯ ಬಳಿ ಇರುವ ಉಂಗುರ ಆತನಿಗೆ ಸೇರಿದ್ದಲ್ಲ. ಅದು ಸರ್ಕಾರಿ ಸ್ವತ್ತು ಎಂದು ಅನೇಕರು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ನ್ಯಾಟೋ ಪಡೆಗಳ ದಾಳಿಗೆ ತುತ್ತಾಗಿ ಶಿರ್ತೆ ಬಳಿ ದುರಂತ ಸಾವನ್ನಪ್ಪಿದ್ದರು. ಇತ್ತೀಚೆಗೆ ಗಡಾಫಿ ಮಗ ಸೈಫ್ ಅಲ್ ಇಸ್ಲಾಮ್ ಕೂಡಾ ಸೆರೆಸಿಕ್ಕಿದ್ದ. ಅಪ್ಪನಂತೆ ಕಾಮಪಿಪಾಸು ಎಂದು ಆರೋಪ ಹೊರೆಸಲಾಗಿತ್ತು. ಬೇಕಾದರೆ ಸೈಫ್ ನನ್ನು 20 ಮಿಲಿಯನ್ ಡಾಲರ್ ಗೆ ಹರಾಜು ಹಾಕಿ ಎಂದು ಫೇಸ್ ಬುಕ್ ನಲ್ಲಿ ಕೂಗು ಎದ್ದಿದೆ.












Click it and Unblock the Notifications