ಫುಟ್ಬಾಲ್ ಅಭಿಮಾನಿಗಳ ಗಲಭೆ, 73 ಜನ ಸಾವು

Egyptian league match Clash
ಕೈರೋ, ಫೆ.2: ಇಲ್ಲಿನ ಫುಟ್ಬಾಲ್ ಮೈದಾನದ ಹಸಿರು ಹುಲ್ಲು ರಕ್ತಮಯವಾಗಿಬಿಟ್ಟಿದೆ. ಸ್ಥಳೀಯ ಲೀಗ್ ಪಂದ್ಯದ ನಂತರ ಆರಂಭವಾದ ಗಲಭೆ, ಘರ್ಷಣೆ ತಾರಕಕ್ಕೇರಿ ಅಭಿಮಾನಿಗಳ ಕಾದಾಟಕ್ಕೆ ನಾಂದಿ ಹಾಡಿತು.

ಅಭಿಮಾನಿಗಳ ಹೊಡೆದಾಟದಲ್ಲಿ ಸುಮಾರು 73ಜನ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಜನಪ್ರಿಯ ತಂಡ ಎಲ್ ಅಹ್ಲೆ ತಂಡವನ್ನು 0-3 ಅಂತರದಿಂದ ಪೋರ್ಟ್ ಸೆಡ್ ಸಿಟಿ ತಂಡ ಎಲ್ ಮಸ್ರಿ ಸೋಲಿಸಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.[ವಿಡಿಯೋ ನೋಡಿ]

ಪಂದ್ಯದ ನಂತರ ಸೋಲಿನ ಕಹಿ ಸಹಿಸದ ತಂಡದ ಅಭಿಮಾನಿಗಳು ಎದುರಾಳಿ ತಂಡದ ಅಭಿಮಾನಿಗಳ ಮೇಲೆ ಕಲ್ಲಿನ ಮಳೆಗೆರೆಯತೊಡಗಿದರು. ರೆಫ್ರಿ ಕೊನೆ ವಿಷಲ್ ಊದಿದ ಮರುಕ್ಷಣವೇ ಅಭಿಮಾನಿಗಳು ಮೈದಾನಕ್ಕೆ ಇಳಿದು ಕೈಗೆ ಸಿಕ್ಕ ಬಾಟಲುಗಳನ್ನು ಎಸೆಯುತ್ತಾ ಕೂಗಾಡುತ್ತಾ ಆಕ್ರೋಶಭರಿತರಾಗಿ ಮುನ್ನುಗ್ಗಿದ್ದರು. ಅಭಿಮಾನಿಗಳನ್ನು ತಡೆಯುವ ಪ್ರಯತ್ನದಲ್ಲಿ ಭದ್ರತಾ ಸಿಬ್ಬಂದಿ ವಿಫಲರಾದರು.

ಧಂಗೆಯನ್ನು ಹತ್ತಿಕ್ಕಲು ಈಜಿಪ್ಟ್ ನ ಮಿಲಿಟರಿ ಅಧಿಕಾರಿ ಮಾರ್ಷಲ್ ಹುಸೇನ್ ತಂತ್ವಾಯಿ ಎರಡು ಮಿಲಿಟರಿ ವಿಮಾನಗಳನ್ನು ಪೊರ್ಟ್ ಸೆಡ್ ಗೆ ಕಳಿಸಿದ್ದಾನೆ. ಆದರೆ, ಈ ಗಲಭೆ ಪೂರ್ವ ನಿಯೋಜಿತ ಎಂದು ಇಸ್ಲಾಮಿಕ್ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. ನೈಲ್ ಟಿವಿ ವರದಿಯ ಪ್ರಕಾರ ಗಲಭೆಯಿಂದ ಸಾವನ್ನಪ್ಪಿರುವವರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಗಳಿದೆ. ಎಲ್ ಅಹ್ಲೆ ತಂಡದ ಅಭಿಮಾನಿಗಳು ಎಲ್ ಮಸ್ರಿ ತಂಡವನ್ನು ಅವಹೇಳನ ಮಾಡುವ ಪೋಸ್ಟರ್ ಗಳನ್ನು ಹಿಡಿದು ಅಭಿಮಾನಿಗಳು ಕಿಚಾಯಿಸಿದ್ದು ಗಲಭೆಗೆ ಮೂಲ ಕಾರಣ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+