ಎಲ್ಲ 2ಜಿ ಲೈಸೆನ್ಸ್ ಗೋತಾ: ಕೇಂದ್ರಕ್ಕೆ ತೀವ್ರ ಮುಖಭಂಗ
ನವದೆಹಲಿ,
ಫೆ.2: 2ಜಿ ಹಗರಣ ಸಂಬಂಧ ಸುಪ್ರೀಂಕೋರ್ಟ್ ಇದೀಗ ತಾನೆ ಮಹತ್ವದ ತೀರ್ಪು ನೀಡಿದೆ. 2008ರ ಜನವರಿಯಿಂದೀಚೆಗೆ ದೂರಸಂಪರ್ಕ ಸೇವಾ ಕಂಪನಿಗಳಿಗೆ ನೀಡಿರುವ ತರಂಗಾತರಂಗ ಲೈಸೆನ್ಸುಗಳನ್ನು ತಕ್ಷಣ ರದ್ದುಪಡಿಸವಂತೆ ಆದೇಶಿಸಿದೆ. ಇದರಿಂದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. id="toptextpromo">ಚಿದಂಬರಂ
ತೀರ್ಪು ಶನಿವಾರಕ್ಕೆ: ಒಟ್ಟು 122 ಕಂಪನಿಗಳಿಗೆ ನೀಡಿರುವ 2ಜಿ ಲೈಸೆನ್ಸ್ ಕಾನೂನುಬಾಹಿರವಾಗಿದೆ ಎಂದು ಸ್ಪಷ್ಟವಾಗಿ ಹೇಳಿರುವ ಕೋರ್ಟ್, ತಕ್ಷಣ ಅದನ್ನು ರದ್ದುಪಡಿಸುವಂತೆ ಸೂಚಿಸಿದೆ. id='are-slot-1' class='oiad oi-axt oiadv'> id='top-searched-articles'>ಇನ್ನು,
ಗೃಹ ಸಚಿವ ಪಿ ಚಿದಂಬರಂ ಸ್ಪೆಕ್ಟ್ರಂ ದರ ನಿಗದಿಪಡಿಸುವಲ್ಲಿ ತಮ್ಮ ಕರಾಮತ್ತು ತೋರಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಬೇಕೆ, ಬೇಡವೇ ಎಂಬುದನ್ನು ಸಿಬಿಐ ಕೋರ್ಟ್ ವ್ಯಾಪ್ತಿಗೆ ವರ್ಗಾಯಿಸಿದೆ. ಫೆ. 4ಕ್ಕೆ ಈ ಕುರಿತು ತೀರ್ಪು ಹೊರಬೀಳಲಿದೆ.











Click it and Unblock the Notifications