ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇಮ್ ಶೇಮ್, ಕೆಆರ್ ಮಾರುಕಟ್ಟೆ ಅಡವಿಟ್ಟ ಬಿಬಿಎಂಪಿ

|
Google Oneindia Kannada News

K R Market, Bangalore
ಬೆಂಗಳೂರು, ಫೆ 2: ಸಾಲದ ಸುಳಿಯಲ್ಲಿ ತತ್ತರಿಸಿ ಹೋಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅದರಿಂದ ಹೊರಬರಲು ಹೊಸ ದಾರಿ ಕಂಡುಹಿಡಿದು ಕೊಂಡಿದೆ. ನೂರಾರು ವರ್ಷಗಳ ಇತಿಹಾಸವಿರುವ ನಗರದ ಹೃದಯ ಭಾಗದಲ್ಲಿರುವ ಕೃಷ್ಣರಾಜೇಂದ್ರ ಮಾರುಕಟ್ಟೆಯನ್ನು ಬಿಬಿಎಂಪಿ ಅಡವಿಡಲು ನಿರ್ಧರಿಸಿದೆ ಎನ್ನಲಾಗಿದೆ.

ಸುಮಾರು 500 ಕೋಟಿ ರೂಪಾಯಿಗೆ ಬಿಬಿಎಂಪಿ ಐತಿಹಾಸಿಕ ಕೆ ಆರ್ ಮಾರುಕಟ್ಟೆಯನ್ನು ಹುಡ್ಕೋಗೆ (Housing and Urban Development Corporation) ಅಡವಿಡಲು ನಿರ್ಧರಿಸಿದೆ ಎನ್ನಲಾಗಿದೆ. ಇದರ ಬಗ್ಗೆ ಬಿಬಿಎಂಪಿ ಆಯುಕ್ತ ಶಂಕರಲಿಂಗೇ ಗೌಡ ಕೊಂಚ ಸುಳಿವು ಕೂಡಾ ನೀಡಿದ್ದಾರೆ.

ಬಿಬಿಎಂಪಿಯ ಈ ರೀತಿಯ ನಿರ್ಧಾರ ಹೊಸತೇನಲ್ಲ. 1974 ರಲ್ಲಿ ಟೌನ್ ಹಾಲ್ ವೃತ್ತದ ಬಳಿಯಿರುವ ಪಬ್ಲಿಕ್ ಯುಟಿಲಿಟಿ ಕಟ್ಟಡವನ್ನು ಮತ್ತು 1994 ರಲ್ಲಿ ಜಯನಗರ ಮಾರುಕಟ್ಟೆಯನ್ನು ಅಡವಿಟ್ಟ ಉದಾಹರಣೆಗಳಿವೆ. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯ ಉದಯಶಂಕರ್ ಬಿಬಿಎಂಪಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆಂದು ವರದಿಯಾಗಿದೆ.

ಸರಕಾರ ಬಿಬಿಎಂಪಿಗೆ ಆರ್ಥಿಕ ಭದ್ರತೆ ನೀಡಬೇಕು, ಇಲ್ಲವಾದಲ್ಲಿ ಇಂತಹ ಕ್ರಮ ಕೈಗೊಳ್ಳದೆ ಬೇರೆ ವಿಧಿಯಿಲ್ಲ ಎಂದು ಆಯುಕ್ತ ಶಂಕರಲಿಂಗೇ ಗೌಡ ಬಿಬಿಎಂಪಿ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆನ್ನಲಾಗಿದೆ.

English summary
Cash-strapped Bruhat Bangalore Mahanagara Palike (BBMP) has finally found a way to ‘mobilise’ funds to repay its loans and also for other purposes. It is mortgaging its properties. This was revealed by BBMP Commissioner M K Shankarlinge Gowda. BBMP decided pledge the historical Krishnarajendra Market (KR Market) for Rs 500 crore,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X