ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಔಟ್ ಸೋರ್ಸಿಂಗ್: ಒಬಾಮಾಗೆ ಪ್ರಣಬ್ ತಿರುಗೇಟು

By Srinath
|
Google Oneindia Kannada News

obama-outsourcing-stand-not-acceptable-pranab-india
ಶಿಕಾಗೊ, ಜ.30: ಭಾರತಕ್ಕೆ ಹೊರಗುತ್ತಿಗೆ ನೀಡಬೇಡಿ ಎಂದು ಅಮೆರಿಕ ಕಂಪನಿಗಳಿಗೆ ಕರೆಯಿತ್ತಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾಗೆ ಭಾರತ ಸರಿಯಾಗಿ ನೀರಿಳಿಸಿದೆ. ಎರಡು ದಿನಗಳ ಭೇಟಿಗಾಗಿ ಶಿಕಾಗೊ ಆಗಮಿಸಿರುವ ಭಾರತದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಒಬಾಮಾ ಮಾತುಗಳು ಭಾರತಕ್ಕೆ ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟ ಉತ್ತರ ನೀಡಿದ್ದಾರೆ.

ಇದರಿಂದ ನಿಮಗೆ ನೀವೇ ಮೋಸ ಮಾಡಿಕೊಂಡಂತೆ. ನಮಗಂತೂ ಇದನ್ನು ಒಪ್ಪಿಕೊಳ್ಳಲಾಗದು. ಇದರಿಂದ ಅಮೆರಿಕದಲ್ಲೇ ಸಂರಕ್ಷನಾತ್ಮಕ ವಿದ್ಯಮಾನಗಳು ಕಾಣಿಸಿಕೊಳ್ಳಲಿವೆ. ಇದು ಅಮೆರಿಕಕ್ಕೇ ತಿರುಗುಬಾಣವಾಗಲಿದೆ ಎಂದು ಪ್ರಣಬ್ ಪರೀಕ್ಷವಾಗಿ ಒಬಾಮಾಗೆ ಎಚ್ಚರಿಸಿದರು.

ಅಮೆರಿಕದ ನೇಮಕಾತಿ ಮಸೂದೆ ಬಗ್ಗೆ ಬುಧವಾರ ಮಾತನಾಡಿದ ಒಬಾಮಾ, ಸ್ಥಳೀಯ ಅಭ್ಯರ್ಥಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಅನುದಾನ ನೀಡುವುದಾಗಿ ಘೋಷಿಸಿದ್ದರು. ಭಾರತದ ಹೊರಗುತ್ತಿಗೆ ಸಂಸ್ಥೆ ಇದರ ನೇರ ಪರಿಣಾಮ ಎದುರಿಸಬೇಕಾಗುತ್ತದೆ. ಹೊರಗುತ್ತಿಗೆ ನಡೆಸುತ್ತಿರುವ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಅನ್ವಯಿಸುವುದಿಲ್ಲ. ಹೊರಗುತ್ತಿಗೆ, ಸಾಲಬಾಧೆ, ಆರ್ಥಿಕ ಸಂಕಷ್ಟದಿಂದ ದೇಶವನ್ನು ಪಾರು ಮಾಡಬೇಕೆಂದು ಅನೇಕ ಹೊಸ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಒಬಾಮಾ ಹೇಳಿದ್ದರು.

English summary
India's Finance Minister Pranab Mukherjee, at his last leg of 2-day state visit to Chicago, candidly commented on US President Barack Obama's suggestion to cut outsourcing, which has been facilitating India's job market in a large-scale over the years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X