ಒಬಾಮಾ ಟೀಂನಿಂದ ಟೆಕ್ ಗುರು ಅನೀಶ್ ಹೊರಕ್ಕೆ
ವಾಷಿಂಗ್ಟನ್,
ಜ.30: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಮಾಹಿತಿ ತಂತ್ರಜ್ಞಾನ ಟೀಂ ಗುರು ಅನಿವಾಸಿ ಭಾರತೀಯ ಅನೀಶ್ ಛೋಪ್ರಾ ಅವರು ತಮ್ಮ ಹುದ್ದೆ ತೊರೆದಿದ್ದಾರೆ. id="toptextpromo">ಪ್ರಥಮ
ಫೆಡೆರಲ್ ಮುಖ್ಯ ತಂತ್ರಜ್ಞಾನ ಅಧಿಕಾರಿ(CTO) ಆಗಿದ್ದ ಅನೀಶ್ ಬಗ್ಗೆ ಒಬಾಮಾ ತುಂಬಾ ಭರವಸೆ ಇಟ್ಟುಕೊಂಡಿದ್ದರು. ಇದ್ದಕ್ಕಿದಂತೆ ಅನೀಶ್ ರಾಜೀನಾಮೆ ನೀಡಿರುವುದು ಒಬಾಮಾಗೆ ಆಘಾತವಾದರೂ, 21 ಶತಮಾನಕ್ಕೆ ತಕ್ಕಂತೆ ನಮ್ಮ ಕಚೇರಿಯನ್ನು ರೂಪಿಸಿದ ಕೀರ್ತಿ ಅನೀಶ್ ಗೆ ಸಲ್ಲುತ್ತದೆ ಎಂದು ಒಬಾಮಾ ಹಾಡಿ ಹೊಗಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>2009ರ
ಮೇ 22ರಂದು ಒಬಾಮಾ ಟೀಂ ಸೇರಿ ಶ್ವೇತಭವನಕ್ಕೆ ಕಾಲಿರಿಸಿದ ಛೋಪ್ರಾ, ಅವರು ಬಹುಬೇಗ ಜನಪ್ರಿಯತೆ ಗಳಿಸಿದರು. ಹಾರ್ವರ್ಡ್ ನ ಕೆನ್ನಡಿ ಶಾಲೆಯಿಂದ ಪದವಿ ಪಡೆದಿರುವ ಛೋಪ್ರಾ ರಾಜಕೀಯಕ್ಕೆ ಧುಮಕುವ ಲಕ್ಷಣಗಳು ಕಂಡು ಬಂದಿದೆ. ಒಬಾಮಾಗೆ ಟ್ವೀಟರ್ ಬಳಕೆ, ಪ್ರಚಾರಕ್ಕೆ ತಂತ್ರಜ್ಞಾನ ಬಳಕೆ ಪಾಠ ಮಾಡಿದ್ದ ಅನೀಶ್ ಕಳೆದುಕೊಂಡ ಒಬಾಮಾಗೆ ಸಹಜವಾಗಿ ಬೇಸರವಾಗಿದೆ.











Click it and Unblock the Notifications