ಅಲ್ಸೆಕ್ ಟೆಕ್ನಾಲಜೀಸ್ ಉದ್ಯೋಗಿಗಳಿಂದ ರಕ್ತದಾನ
ಬೆಂಗಳೂರು,
ಜ. 28 : ಬಿ.ಪಿ.ಓ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಲ್ಸೆಕ್ ಟೆಕ್ನಾಲಜೀಸ್ ಕಂಪನಿ, ಜ.27ರಂದು, 63ನೇ ಗಣರಾಜ್ಯೋತ್ಸವದ ಅಂಗವಾಗಿ ಸಂಜಯನಗರದ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಿತ್ತು. id="toptextpromo">ಭಗವಾನ್
ಮಹಾವೀರ್ ಜೈನ್ ಆಸ್ಪತ್ರೆಯ ವೈದ್ಯರ ಉಪಸ್ತಿತಿಯಲ್ಲಿ ನಡೆದ ಈ ಶಿಬಿರದಲ್ಲಿ ಅಲ್ಸೆಕ್ ನ ಉದ್ಯೋಗಿಗಳು ಉತ್ಸಾಹದಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆ 47 ಯೂನಿಟ್ ರಕ್ತ ಸಂಗ್ರಹಿಸಿ ಲಯನ್ಸ್ ಕ್ಲಬ್ ಗೆ ಕಳುಹಿಸಿಕೊಡಲಾಯ್ತು. id='are-slot-1' class='oiad oi-axt oiadv'> id='top-searched-articles'>ಕೆಲ
ದಿನಗಳ ಹಿಂದೆ ಜ.12ರಂದು ಸ್ವಾಮಿ ವಿವೇಕಾನಂದ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಕೂಡ ರಾಮಯ್ಯ ಸಂಸ್ಥೆ ಲಯನ್ಸ್ ಬ್ಲಡ್ ಬ್ಯಾಂಕ್ ಜೊತೆ ಕೈಜೋಡಿಸಿತ್ತು.











Click it and Unblock the Notifications