90 ಮಿಲಿಯನ್ ಪ್ಲಸ್ ಜನರ ಮೆಚ್ಚಿನ ಗೂಗಲ್ ಪ್ಲಸ್

ಕಳೆದ ಜೂನ್ ನಲ್ಲಿ ಪ್ರಾಯೋಗಿಕವಾಗಿ ಆರಂಭವಾದ ಗೂಗಲ್, ಸೆಪ್ಟೆಂಬರ್ ವೇಳೆಗೆ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಿತ್ತು. ಈಗ ಗೂಗಲ್ ಪ್ಲಸ್ ಬಳಕೆದಾರರ ಸಂಖ್ಯೆ 90 ಮಿಲಿಯನ್ ಪ್ಲಸ್ ಆಗಿದೆ.
ಇದೇ ಸಂಖ್ಯೆ ಬಳಕೆದಾರರನ್ನು ಹೊಂದಲು ಫೇಸ್ ಬುಕ್ ಸುಮಾರು 4 ವರ್ಷ ತೆಗೆದುಕೊಂಡಿತ್ತು. ಆದರೆ, ಇಂದು ಫೇಸ್ ಬುಕ್ 800 ಮಿಲಿಯನ್ ಬಳಕೆದಾರರನ್ನ ಹೊಂದಿದೆ.
ಗೂಗಲ್ ಪ್ಲಸ್ ನ ಜನಪ್ರಿಯತೆಯಿಂದ ಖುಷಿಯಾಗಿರುವ ಸಿಇಒ ಲಾರಿ ಪೇಜ್, ಕಂಪನಿಯ ತನ್ನ ಬಳಕೆದಾರರಿಗೆ ಉತ್ತಮ ಸಾಧನ ನೀಡಿದೆ ಎಂಬ ತೃಪ್ತಿ ಇದೆ ಎಂದಿದ್ದಾರೆ.
ಅಕ್ಟೋಬರ್ ಡಿಸೆಂಬರ್ ನಲ್ಲಿ 2.71 ಬಿಲಿಯನ್ ಡಾಲರ್ ನಿವ್ವಳ ಆದಾಯ ಪಡೆದುಕೊಂಡರೂ ಮಾರುಕಟ್ಟೆಯಲ್ಲಿ ನಿರೀಕ್ಷೆಗೆ ತಕ್ಕ ಪ್ರತಿಫಲ ಪಡೆದಿಲ್ಲ ಎಂದು ಗೂಗಲ್ ಹೇಳಿಕೊಂಡಿದೆ.
ಡಿ.31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ.25ರಷ್ಟು ಪ್ರಗತಿ ಸಾಧಿಸಿದ್ದು, ಒಟ್ಟಾರೆ 10.58 ಬಿಲಿಯನ್ ಡಾಲರ್ ಆದಾಯ ಗಳಿಸಿದೆ.












Click it and Unblock the Notifications