ಮಧ್ಯಪ್ರದೇಶದಲ್ಲಿ ಇನ್ಫೋಸಿಸ್ ಗೆ 130 ಎಕರೆ ಭೂಮಿ
ಇಂದೋರ್,
ಜ.20: ಮಧ್ಯಪ್ರದೇಶದ ವಿಶೇಷ ಆರ್ಥಿಕ ವಲಯದಲ್ಲಿ ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆಗೆ ಸುಮಾರು 130 ಎಕರೆ ಭೂಮಿ ಸಿಗುತ್ತಿದೆ. ಇದರಲ್ಲಿ ಏನು ವಿಶೇಷ ಎನಿಸಬಹುದು. ಇನ್ಫಿ ಸಂಸ್ಥೆ ಕೇಳಿದ್ದು 100 ಎಕರೆ ಆದರೆ ಸಿಗುತ್ತಿರುವುದು 130 ಎಕರೆ. id="toptextpromo">ಸೂಪರ್
ಕಾರಿಡಾರ್ ಅಡಿಯಲ್ಲಿ ಇನ್ಫೋಸಿಸ್ ಸಂಸ್ಥೆಗೆ 100 ಎಕರೆ ಬದಲಿಗೆ 130 ಎಕರೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ತಾಂತ್ರಿಕ ದೋಷದಿಂದಾಗಿ 100 ಎಕರೆ ಮಾತ್ರ ಎಂದು ಈ ಮುಂಚೆ ಪ್ರಕಟಿಸಲಾಗಿತ್ತು ಎಂದು ಮಧ್ಯಪ್ರದೇಶದ ಐಟಿ ಸಚಿವ ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪ್ರತಿ
ಎಕರೆಗೆ 20 ಲಕ್ಷ ರುನಂತೆ ಭೂಮಿಯನ್ನು ಹಂಚಲಾಗಿದೆ. ಇನ್ಫೋಸಿಸ್ ಹಾಗೂ ಟಿಸಿಎಸ್ ಸಂಸ್ಥೆ ತಲಾ 100 ಎಕರೆ ನೀಡಲು ನಿರ್ಧರಿಸಲಾಗಿತ್ತು. ಏಪ್ರಿಲ್ ನಲ್ಲಿ ಈ ಎರಡೂ ಸಂಸ್ಥೆಗಳು ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಸಚಿವ ವಿಜಯ್ ಹೇಳಿದ್ದಾರೆ.











Click it and Unblock the Notifications