ವಕೀಲರಿಂದ ಜಾಥಾ, ಮೆರವಣಿಗೆ: ಇಂದು ಏನಾಗುವುದೋ?
ಬೆಂಗಳೂರು,
ಜ. 19: ರಾಜಧಾನಿಯಲ್ಲಿ ವಕೀಲರ ಪುಂಡಾಟಿಕೆಯ ಬಳಿಕ ಗುರುವಾರ ರಾಜ್ಯದ ಎಲ್ಲ ನ್ಯಾಯಾಲಯಗಳ ಕಲಾಪಗಳನ್ನು ಬಹಿಷ್ಕರಿಸಲು ಬೆಂಗಳೂರು ವಕೀಲರ ಸಂಘ ನಿರ್ಧರಿಸಿದೆ. ಆದರೆ ಹೈಕೋರ್ಟ್ ಚೀಫ್ ಜಸ್ಟೀಸ್ ವಿಕ್ರಮ್ ಜಿತ್ ಸೇನ್ ಅವರು ವಕೀಲರು ಕಲಾಪ ಬಹಿಷ್ಕಾರಕ್ಕೆ ಕರೆ ನೀಡಿರುವುದು ಬಗ್ಗೆ ಆಶ್ಚರ್ಯ, ಖೇದ ವ್ಯಕ್ತಪಡಿಸಿದ್ದು, ಗುರುವಾರ ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲೂ ದೈನಂದಿನ ಕಲಾಪ ಎಂದಿನಂತೆ ನಡೆಯಲಿದೆ ಎಂದಿದ್ದಾರೆ. id="toptextpromo">ಈ
ಮಧ್ಯೆ, ಬೆಂಗಳೂರು ವಕೀಲರು ಗುರುವಾರ ಬೆಳಗ್ಗೆ 11 ಗಂಟೆ ವೇಳೆಗೆ ಸಿಟಿ ಸಿವಿಲ್ ಕೋರ್ಟಿನಿಂದ ಮೆರವಣಿಗೆ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲ ಭಾರದ್ವಾಜ್ ಅವರಿಗೆ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮ ಹಾಕಿಕೊಂಡಿರುವುದರಿಂದ ವಿಧಾನಸೌಧ ಸುತ್ತ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಜತೆಗೆ ಸಾರ್ವಜನಿಕ ರಿಂದಲೂ ವಕೀಲರ ಪುಂಡಾಟಿಕೆ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಕೀಲರ ಇಂದಿನ ಕಲಾಪಪಟ್ಟಿ ಕುತೂಹಲದ ಜೇನುಗೂಡಾಗಿದೆ. id='are-slot-1' class='oiad oi-axt oiadv'> id='top-searched-articles'>ಯಾವುದಕ್ಕೇ
ಆಗಲಿ ಸಾರ್ವಜನಿಕರು ಅದರಲ್ಲೂ ವಾಹನ ಸವಾರರು ಇಂದು ಬೆಂಗಳೂರಿನ ಹೃದಯ ಭಾಗದಲ್ಲಿ ಸಂಚರಿಸುವಾಗ ಸಂಭವನೀಯ ಟ್ರಾಫಿಕ್ ಜಾಮ್ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಒಳಿತು.











Click it and Unblock the Notifications