ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರ್ಟ್ ಕಲಾಪ ಬಹಿಷ್ಕಾರ: CJ ಕಿಡಿಕಿಡಿ

By Srinath
|
Google Oneindia Kannada News

bangalore-lawyers-to-boycott-courts-cj-angry
ಬೆಂಗಳೂರು, ಜ. 19: ವಕೀಲ ಬಾಲಕೃಷ್ಣ ಎಂಬವರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಬುಧವಾರ ತನ್ನ ಪದಾಧಿಕಾರಿಗಳ ಸಭೆ ನಡೆಸಿದ ಬೆಂಗಳೂರು ವಕೀಲರ ಸಂಘ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ.

ಪೊಲೀಸರು ತಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಿಕೊಂಡಿರುವುದರಿಂದ ಗುರುವಾರ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳ ಕಲಾಪವನ್ನು ಬಹಿಷ್ಕರಿಸುವುದು. ರಾಜಭವನದವರೆಗೆ ಕಾಲ್ನಡಿಗೆ ಜಾಥಾ ನಡೆಸಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸುವುದು ಮತ್ತು ತ್ಯಾಗರಾಜನಗರ ಪೊಲೀಸ್ ಠಾಣೆಯ ನಿರೀಕ್ಷಕರ ಅಮಾನತಿಗೆ ರಾಜ್ಯ ಸರಕಾರವನ್ನು ಒತ್ತಾಯಿಸುವ ನಿರ್ಣಯಗಳನ್ನು ಸಂಘ ಕೈಗೊಂಡಿದೆ.

CJ ಕಿಡಿಕಿಡಿ:
ಬುಧವಾರ ಮಧ್ಯಾಹ್ನದ ವೇಳೆ ರಾಜ್ಯದ ನ್ಯಾಯಾಲಯಗಳ ಬಹಿಷ್ಕಾರಕ್ಕೆ ಬೆಂಗಳೂರು ವಕೀಲರ ಸಂಘ ಕರೆ ನೀಡಿರುವ ಸುದ್ದಿ ಹೈಕೋರ್ಟ್ ನಲ್ಲಿ ಒಂದೆಡೆ ಹರಿದಾಡುತ್ತಿದ್ದರೆ, ಮತ್ತೊಂದೆಡೆ ಈ ವಿಷಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ತಿಳಿದಿರಲಿಲ್ಲ. ಅರ್ಜಿಯೊಂದರ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿಗಳು ನಾಳೆಗೆ ಮುಂದೂಡುವ ಪ್ರಸಂಗ ಎದುರಾಯಿತು.

ಈ ಸಮಯದಲ್ಲಿ ಮಹಿಳಾ ವಕೀಲರೊಬ್ಬರು ನಾಳೆ ಹೈಕೋರ್ಟ್ ಕಲಾಪ ಬಹಿಷ್ಕರಿಸಲು ವಕೀಲರ ಸಂಘ ನಿರ್ಧರಿಸಿರುವ ವಿಷಯವನ್ನು ಮುಖ್ಯನ್ಯಾಯಮೂರ್ತಿಗಳ ಗಮನಕ್ಕೆ ತಂದರು. ಇದರಿಂದ ಆಶ್ಚರ್ಯಗೊಂಡ ಸಿಜೆ ಅವರು, ಏನಿದು ಬಹಿಷ್ಕಾರ? ಎಂದು ಪ್ರಶ್ನಿಸಿದರು.

ಆಗ ವಕೀಲರ ಪ್ರತಿಭಟನೆಯ ಪ್ರಹಸನವನ್ನು ಆ ವಕೀಲರು ವಿವರಿಸಿದರು. ಕೂಡಲೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು, ಬಹಿಷ್ಕಾರಕ್ಕೂ ನಮಗೂ ಸಂಬಂಧವಿಲ್ಲ. ಹೈಕೋರ್ಟ್‌ನಲ್ಲಿ ಯಾವುದೆ ಬಹಿಷ್ಕಾರ ನಡೆಸುವಂತಿಲ್ಲ. ಎಂದಿನಂತೆ ಕಲಾಪ ನಡೆಯುತ್ತದೆ ಎಂದು ಅವರು ಹೇಳಿದರು. ಸಿಜೆಯ ಈ ಹೇಳಿಕೆಯಿಂದ ಹೈಕೋರ್ಟ್‌ನ ಕಲಾಪ ಬಹಿಷ್ಕಾರ ವಿಷಯ ತೀವ್ರ ಕುತೂಹಲ ಕೆರಳಿಸಿದೆ.

English summary
Lawyers in Bangalore said they would abstain from work on Jan 19 after police decided to register criminal cases against lawyers who blocked traffic on an arterial road, evoking public outrage. But Chief Justice of the Karnataka high court Justice Vikramajit Sen is angry about Advocates decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X