ಮೋದಿಗೆ ಮುಖಭಂಗ: ಲೋಕಾಯುಕ್ತ ನೇಮಕಕ್ಕೆ ಅಸ್ತು
ಅಹಮದಾಬಾದ್,
ಸೆ. 26: ಲೋಕಾಯುಕ್ತ ನೇಮಕ ವಿಚಾರದಲ್ಲಿ ಸುಮಾರು ಆರು ತಿಂಗಳ ಹಿಂದೆ ರಾಜ್ಯಪಾಲೆ ಡಾ. ಕಮಲಾ ಜತೆ ಗುದ್ದಾಡಿ ಮೈಕೈ ನೋಯಿಸಿಕೊಂಡಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಇದೀಗ ಹೈಕೋರ್ಟ್ ಕಮಪಾಳಮೋಕ್ಷ ಮಾಡಿದೆ. id="toptextpromo">ಸುಮಾರು
ಏಳೂವರೆ ವರ್ಷಗಳಿಂದ (2003ರ ನವೆಂಬರಿನಿಂದ ಖಾಲಿ ಬಿದ್ದಿತ್ತು) ಲೋಕಾಯುಕ್ತರನ್ನೇ ನೇಮಿಸದೇ ಕಾಲ ತಳ್ಳಿಕೊಂಡು ಬಂದಿದ್ದ ಮೋದಿ, ರಾಜ್ಯಪಾಲೆ ಡಾ. ಕಮಲಾ ತಮ್ಮನ್ನು ಧಿಕ್ಕರಿಸಿ ರಾಜ್ಯದ ನೂತನ ಲೋಕಾಯುಕ್ತರನ್ನಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಆರ್ಎ ಮೆಹ್ತಾ ಅವರನ್ನು ನೇಮಿಸಿದ್ದರ ವಿರುದ್ಧ ಹೈಕೋರ್ಟಿಗೆ ಮೊರೆ ಹೋಗಿದ್ದರು. id='are-slot-1' class='oiad oi-axt oiadv'> id='top-searched-articles'>ಬುಧವಾರ
ಮೋದಿ ಮನವಿಯನ್ನು ಆಲಿಸಿದ ಹೈಕೋರ್ಟ್, ನ್ಯಾ ಮೆಹ್ತಾ ನೇಮಕಕ್ಕೆ ತನ್ನ ಸಮ್ಮತಿ ಸೂಚಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.











Click it and Unblock the Notifications