ಶಾಲೆಗಳಲ್ಲಿ ಅಗ್ನಿನಂದಕಗಳ ಅಳವಡಿಕೆ ಕಡ್ಡಾಯ

ಕೆಲ ದಿನಗಳ ಹಿಂದಷ್ಟೇ ಕೋಣನಕುಂಟೆಯ ದಿ ಸಿಲಿಕಾನ್ ಸಿಟಿ ಪಬ್ಲಿಕ್ ಶಾಲೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಈ ನಿಯಮ ಕಡ್ಡಾಯ ಮಾಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದರೂ ಅನೇಕ ಶಾಲೆಗಳು ಇದನ್ನು ಪಾಲಿಸಿಲ್ಲ.
ಸರ್ವೋಚ್ಚ ನ್ಯಾಯಾಲಯದಲ್ಲಿ 2009ರ ಏಪ್ರಿಲ್ 13ರಂದು ರಿಟ್ ಅರ್ಜಿಯಲ್ಲಿ ರಾಜ್ಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಆವರಣದಲ್ಲಿ ಅಗ್ನಿನಂದಕಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು ಎಂದು ನಿರ್ದೇಶನ ನೀಡಿತ್ತು.
ಶಿಕ್ಷಣ ಮಇಲಾಖೆಯಿಂದ ಈ ಬಗ್ಗೆ ಈಗಾಗಲೆ ಸೂಚನೆ ನೀಡಿದ್ದರೂ ಹಲವಾರು ಶಾಲೆಗಳು ಇದನ್ನು ಪಾಲಿಸಿಲ್ಲ. ಆದ್ದರಿಂದ ಅನುದಾನಿತ, ಅನುದಾನ ರಹಿತ ಶಾಲೆಗಳೂ ಸಹ ಈ ನೋಟೀಸನ್ನು ಪ್ರಕಟಿಸಿದ ದಿನಾಂಕದಿಂದ 15 ದಿನಗಳ ಒಳಗಾಗಿ ಐ.ಎಸ್.ಐ. ಮಾರ್ಕ್ ಉಳ್ಳ ಉತ್ತಮ ಗುಣಮಟ್ಟದ ಉತ್ತಮ ಸಾಮರ್ಥ್ಯವುಳ್ಳ ಅಗ್ನಿನಂದಕ ಉಪಕರಣವನ್ನು ಪ್ರತಿಯೊಂದು ಬ್ಲಾಕ್‌ಗೆ ಒಂದರಂತೆ ಅಳವಡಿಸಲು ಸೂಚಿಸಿದೆ. ತಪ್ಪಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಅಂತಿಮವಾಗಿ ಎಚ್ಚರಿಸಿದ್ದಾರೆ.












Click it and Unblock the Notifications