ಕಾಂಗ್ರೆಸ್ ಪರ ಸಲ್ಮಾನ್ ಖಾನ್ ಪ್ರಚಾರಕ್ಕೆ ರೆಡಿ?

ಮತದಾರರನ್ನು ಓಲೈಸಲು ಇನ್ನಿಲ್ಲದ ಸಾಹಸ ಪಡುತ್ತಿರುವ ಕಾಂಗ್ರೆಸ್, ಸಲ್ಮಾನ್ ಖಾನ್ ಅವರ ಜನಪ್ರಿಯತೆಯ ಲಾಭ ಪಡೆಯಲು ಯೋಜಿಸಿದೆ. ಆಗ್ರಾದಲ್ಲಿ ನಡೆದ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಮತಯಾಚಕರ ಪಟ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹೆಸರು ಕೂಡಾ ಇದೆ.
ಅಲ್ಲದೆ ನಟ ರಾಜಾ ಮುರಾದ್, ಸಂಸದ ರಾಜ್ ಬಬ್ಬರ್ ಕೂಡಾ ಮತಯಾಚನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಉತ್ತರ ಪ್ರದೇಶದಲ್ಲಿ ಫೆ.8ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ.(ಒನ್ ಇಂಡಿಯಾ ಸುದ್ದಿ)












Click it and Unblock the Notifications