ಗೂಗಲ್ ವಿರುದ್ಧ ಕಾನೂನು ಕ್ರಮಕ್ಕೆ ಸರ್ಕಾರ ಆದೇಶ

ಅಶ್ಲೀಲ ಹಾಗೂ ಆಕ್ಷೇಪಾರ್ಹ ಚಿತ್ರ ಮತ್ತು ಮಾಹಿತಿಯನ್ನು ತೆಗೆದು ಹಾಕುವಂತೆ ಸುಮಾರು 10 ತಾಣಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಈ ಮುಂಚೆ ಸಮನ್ಸ್ ಕೂಡಾ ಜಾರಿ ಮಾಡಲಾಗಿದೆ. ಆದರೆ, ಈ ಬಗ್ಗೆ ತಾಣಗಳು ಎಚ್ಚೆತ್ತುಕೊಳ್ಳದಿದ್ದರೆ ಚೀನಾ ಮಾದರಿಯಲ್ಲಿ ಗೂಗಲ್ ಹಾಗೂ ಫೇಸ್ ಬುಕ್ ತಾಣಗಳನ್ನು ನಿಷೇಧಿಸುವಂತೆ ನ್ಯಾ. ಸುರೇಶ್ ಕೈಟ್ ಆದೇಶಿಸಿದ್ದಾರೆ.
ಆದರೆ, ಗೂಗಲ್ ಪರ ವಾದಿಸಿದ ಮಾಜಿ ಅಡಿಷಿನಲ್ ಸಾಲಿಸಿಟರ್ ಜನರಲ್ ಮುಕುಲ್ ರೊಟಂಗಿ, ಪ್ರತಿ ದಿನ ಕೋಟ್ಯಾಂತರ ಮಂದಿ ಗೂಗಲ್ ತಾಣಕ್ಕೆ ಭೇಟಿ ನೀಡುತ್ತಾರೆ. ಎಲ್ಲರ ಮಾಹಿತಿಯನ್ನು ಪರಿಶೀಲಿಸಿ ಪ್ರಕಟಿಸಲು ಸಾಧ್ಯವಿಲ್ಲ. ಆಕ್ಷೇಪಾರ್ಹ ಮಾಹಿತಿ ಇದ್ದರೆ ಸ್ಪಾಮ್ ಎಂದು ಸೂಚಿಸಿದರೆ ಸಂಸ್ಥೆ ಅಂಥ ಲೇಖನ ಅಥವಾ ಚಿತ್ರವನ್ನು ತೆಗೆದು ಹಾಕಬಹುದು ಇಲ್ಲದಿದ್ದರೆ ಕಷ್ಟ ಎಂದಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292 (ಅಶ್ಲೀಲ ಪುಸ್ತಕಗಳ ಮಾರಾಟ), 293 (ಅಪ್ರಾಪ್ತರಿಗೆ ಅಶ್ಲೀಲ ವಸ್ತುಗಳ ಮಾರಾಟ) ಮತ್ತು 120-ಬಿ (ಅಪರಾಧವೆಸಗಲು ಸಂಚು) ಅಡಿಗಳಲ್ಲಿ ಪ್ರಕರಣವನ್ನು ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ. ಆದರೆ, ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸುವ ಬಗ್ಗೆ ಸರ್ಕಾರ ಸ್ಪಷ್ಟಪಡಿಸಿಲ್ಲ. ಕಾನೂನು ರೀತಿಯಲ್ಲಿ ಹೋರಾಟ ಮುಂದುವರೆಸಲಿದೆ.












Click it and Unblock the Notifications