ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ಲಿಯಲ್ಲಿ 6 ಕೋಟಿ ರು. ಖೋಟಾ ನೋಟು ಪತ್ತೆ

By Srinath
|
Google Oneindia Kannada News

highetst-fake-currency-detected-new-delhi-jan13
ನವದೆಹಲಿ, ಜ. 13: ನೈರುತ್ಯ ದೆಹಲಿಯಲ್ಲಿ ಗುರುವಾರ ಪತ್ತೆಯಾದ 6 ಕೋಟಿ ರು ಮೌಲ್ಯದ ನಕಲಿ ನೋಟು ವಿಶ್ವದಲ್ಲಿ ಒಂದೇ ಬಾರಿಗೆ ಪತ್ತೆಯಾದ ಭಾರಿ ಮೊತ್ತದ್ದಾಗಿದೆ.

ಆತಂಕದ ವಿಷಯವೆಂದರೆ ನಕಲಿ ನೋಟು ತಯಾರಿಕೆ ಅತ್ಯಾಧುನಿಕವಾಗುತ್ತಿದೆ. ಅಸಲಿ ನೋಟು ಮತ್ತು ನಕಲಿ ನೋಟುಗಳ ನಡುವಣ ವ್ಯತ್ಯಾಸ ತೆಳುವಾಗಿದೆ. ಜನಸಾಮಾನ್ಯರಿಗಂತೂ ಈ ನಕಲಿ ನೋಟುಗಳ್ನು ಪತ್ತೆಹಚ್ಚುವುದು ಸಾಧ್ಯವಾಗುತ್ತಿಲ್ಲ. ನಕಲಿಯನ್ನೇ ಅಸಲಿ ಎಂದುಕೊಂಡು ಚಲಾವಣೆಗೆ ಬಳಸುತ್ತಿದ್ದಾರೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಕೆ. ಗುಪ್ತಾ ಹೇಳಿದ್ದಾರೆ.

ಕಳೆದ 5 ವರ್ಷಗಳಲ್ಲಿ ಭಾರತದ ಅಷ್ಟೇ ಏಕೆ ಇಡೀ ವಿಶ್ವದ ಪೊಲೀಸರು ಇಷ್ಟೊಂದು ಮೊತ್ತದ ನಕಲಿ ನೋಟನ್ನು ಒಮ್ಮೆಗೇ ನೋಡಿರಲಿಲ್ಲ. ಗಮನಾರ್ಹವೆಂದರೆ ಕಳೆದ ಐದು ವರ್ಷಗಳಲ್ಲಿ ಒಟ್ಟು 210 ಪ್ರಕರಣಗಳಲ್ಲಿ 8.39 ಕೋಟಿ ರು ಮೊತ್ತದ ನಕಲಿ ನೋಟು ಪತ್ತೆಯಾಗಿತ್ತು.

2008ರಲ್ಲಿ ಒಂದೇ ವರ್ಷದಲ್ಲಿ 5.91 ಕೋಟಿ ರು. ಪತ್ತೆಯಾಗಿತ್ತು. ಆದರೆ 2010ರಲ್ಲಿ ಪತ್ತೆಯಾದ ಮೊತ್ತ ಕನಿಷ್ಠವಾಗಿದ್ದು ಒಟ್ಟು 44 ಪ್ರಕರಣಗಳಲ್ಲಿ 28.20 ಲಕ್ಷ ರು ಮೌಲ್ಯದ ನಕಲಿ ನೋಟು ಮಾತ್ರ ಪತ್ತೆಯಾಗಿತ್ತು. ಕಳೆದ 5 ವರ್ಷಗಳಲ್ಲಿ ಪತ್ತೆಯಾಗಿರುವ ನಕಲಿ ನೋಟುಗಳ ಪೈಕಿ 100 ಮುಖ ಬೆಲೆಯ ನೋಟು ಹೆಚ್ಚಾಗಿ ಚಲಾವಣೆಯಲ್ಲಿತ್ತು.

English summary
Thursday's (Jan 13) single haul of fake currency from south-west Delhi may enter the world record books as it may surpass in final count the total amount of counterfeit notes city police seized in the past five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X