18 ದಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಟ ಸಿದ್ದರಾಮಯ್ಯ
ಬೆಂಗಳೂರು,
ಜ.12: ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯ ಅವರು ಕನಸಿಂದ ಎಚ್ಚೆತ್ತು ಸೀದಾ ಆಸ್ಟ್ರೇಲಿಯಾಕ್ಕೆ ಹೊರಟಿದ್ದಾರೆ. ತಮ್ಮ ಆಪ್ತರಾದ ಮಹಾದೇವಪ್ಪ, ವೆಂಕಟೇಶ್ ಕುಟುಂಬದ ಜತೆಗೂಡಿ ಸಿದ್ದರಾಮಯ್ಯ ಅವರು ಇಂದು ಸಂಜೆಯೇ ವಿಮಾನ ಹತ್ತಲಿದ್ದಾರೆ. ಅಂದಹಾಗೆ, ಅವರಿಗೆ ಬೆಂಗಳೂರಿನಲ್ಲಿ ಚಳಿ ಜಾಸ್ತಿಯಾಗಿ ಆಸ್ಟ್ರೇಲಿಯಾದಲ್ಲಿ ಬೇಸಿಗೆ ಎಂಜಾಯ್ ಮಾಡಲು ಹೊರಟಂತಿದೆ. id="toptextpromo">ಬರೋಬ್ಬರಿ
18 ದಿನಗಳ ಕಾಲ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಟು ನಿಂತಿರುವ ಸಿದ್ದುಗೆ ಇದು ಸಂಪೂರ್ಣ ಖಾಸಗಿ ಪ್ರವಾಸ. ವಿಧಾನ ಸಭೆ ವಿಪಕ್ಷ ನಾಯಕನಾಗಿ ಸರಕಾರಿ ವೆಚ್ಚದಲ್ಲಾಗಲಿ ಅಥವಾ ತಾವು ಪ್ರತಿಧಿಸುವ ಕಾಂಗ್ರೆಸ್ ಪಕ್ಷದ ಜೋಳಿಗೆಗೆ ಅವರು 'ಕೈ'ಹಾಕಿಲ್ಲ. id='are-slot-1' class='oiad oi-axt oiadv'> id='top-searched-articles'>'ಕಡಲ
ತೀರದ ಸುಂದರ ದೇಶವನ್ನು ಕಣ್ತುಂಬ ನೋಡಿಕೊಂಡು ಬರಲು ಹೋಗುತ್ತಿದ್ದೇವೆ ಅಷ್ಟೆ. ಬೇರೆ ಏನೂ ಉದ್ದೇಶ ಇಲ್ಲ' ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಆದರೆ ಅಪ್ಪಿತಪ್ಪಿಯೂ ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಆಡುತ್ತಿರುವ ಕ್ರಿಕೆಟ್ಟಾಟವನ್ನು ನೋಡಲು ಹೋಗುವುದಿಲ್ಲ ಎಂದು ಸಿದ್ದು ಹೇಳಿದ್ದಾರೆ ಎನ್ನುವುದು ಶುದ್ಧ ಕುಹಕವಷ್ಟೇ!











Click it and Unblock the Notifications