ಅಕ್ರಮ ಕಡತಗಳಿಗೆ ಬಿಜೆಪಿಯಿಂದ ಬೆಂಕಿ
ಬೆಂಗಳೂರು,
ಜ 12: ಬಿಜೆಪಿಯವರು ತಮ್ಮ ಎಲೆಗಳಲ್ಲಿ ಹೆಗ್ಗಣ ಬಿದ್ದರೂ ಬೇರೆಯವರ ಎಲೆಗಳಲ್ಲಿ ನೊಣ ಹುಡುಕುವ ಜಾಯಮಾನದವರು. ಬಿಜೆಪಿ ತಾನು ಅಕ್ರಮವಾಗಿ ಗಳಿಸಿದ ಎಲ್ಲಾ ದಾಖಲೆಗಳನ್ನು ತನಿಖೆಗೂ ಸಿಗದಂತೆ ಸುಟ್ಟು ಹಾಕಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. id="toptextpromo">ಬೃಹತ್
ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದ ಎಚ್ಡಿಕೆ, ರಾಜ್ಯದ ಜನತೆ ಇಂದು ಏನಾದರೂ ಒಳಿತನ್ನು ಅನುಭವಿಸುತ್ತಿದ್ದರೆ ಅದು ನನ್ನ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಇಷ್ಟ ಪಡುತ್ತೇನೆ. ಹೋದಲೆಲ್ಲಾ ಮೋಸ, ವಂಚನೆ, ದೌರ್ಜನ್ಯ ಮಾಡುವುದಷ್ಟೇ ಇಷ್ಟು ದಿನದ ಬಿಜೆಪಿಯ ಸಾಧನೆ ಎಂದು ಕಿಡಿಕಾರಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರೈತ
ಶ್ರಮಿಕ ವರ್ಗಕ್ಕೆ ಸುದಿನಗಳು ಆಗಮಿಸುತ್ತಿದ್ದು ಬಡವರ ಜೀವನದಲ್ಲಿ ಆಶಾಕಿರಣ ಮೂಡಿಸುವ ಒಳ್ಳೆಯ ಜನಪ್ರತಿನಿಧಿಗಳಿಗೆ ರೈತರು ಸಹಕಾರ ನೀಡಲಿ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.











Click it and Unblock the Notifications